Breaking News

ಕಾಂಗ್ರೇಸ್‌ ಪಕ್ಷದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಂದು ಮಾತನಾಡಿ ಮೋದಿಗೆ ಐರನ್ ಲೆಗ್ ಎಂದ ವಿಚಾರವಾಗಿ ಪ್ರತಿಕ್ರೀಯೆ ನೀಡಿದ್ದಾರೆ. ಸಿದ್ದರಾಮಯ್ಯನವರು 2014, 2018, 2019 ರ ವಿಧಾನ ಸಭೆ ಚುನಾವಣೆಗಳಲ್ಲಿ ಮೋದಿಯವರ ವಿರುದ್ದ ಅಪ್ರಬುದ್ದ ಭಾಷೆ ಬಳಸಿದ್ರು.ನರ ರಾಕ್ಷಸ ಎಂದಿದ್ರು, ಆ ಸಮಯದಲ್ಲಿ ಜನ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ 9 ವರ್ಷದ ನಂತರ ಅಧಿಕಾರಕ್ಕೆ ಬಂದಿದ್ದೀರಿ‌. ಸಿದ್ದರಾಮಯ್ಯ, ತಂಗಡಗಿ ಮೋದಿ ಅವರ ವಿರುದ್ದ ಮಾತಾಡೋ ಮುಂಚೆ ನಿಮ್ಮ ಸ್ಥಿತಿ ಏನಿದೆ,ಎಂದು ನೋಡಿಕೊಳ್ಳಿ ಎಂದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದರು, ಪ್ರೀಯಾಂಕ ಗಾಂಧಿ, ರಾಹುಲ್ ಗಾಂಧಿ ಹಿಡಿದುಕೊಂಡು.ನೀವು ಉತ್ತರ ಪ್ರದೇಶದಲ್ಲಿ ಜಿರೋ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು .ಒಂದು‌ ಕಾಲದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಇತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಸ್ಥಿತಿಗೆ ಕಾಂಗ್ರೇಸ್‌ ಪಕ್ಷ ಬಂದು ತಲುಪಿದ್ದೀರಿ. ಅಹಂಕಾರ ಒಳ್ಳೇದಲ್ಲಾ ಎಂದು ಜೋಶಿ ತಿಳಿಸಿದರು. ಜಗತ್ತು ಮೋದಿ ಅವರನ್ನು ಸ್ವೀಕಾರ ಮಾಡಿದೆ.

ಅಪ್ರಬುದ್ದ ಭಾಷೆ ಬಳಸೋದಕ್ಕೆ ಜನ ಉತ್ತರ ಕೊಟ್ಟಿದ್ದಾರೆ.ಮೋದಿ ಕೈ ಬೀಸಿದ ಕಡೆ ನಾವು ಅಧಿಕಾರಕ್ಕೆ ಬಂದಿದ್ದೀವಿ. ಕರ್ನಾಟಕದಲ್ಲಿ ಮಾತ್ರ ನೀವು ಅಧಿಕಾರಕ್ಕೆ ಬಂದಿದ್ದೀರಿ. ಲೋಕಸಭೆಯಲ್ಲಿ ನೀವು ಅಧಿಕೃತ ವಿರೋಧ ಪಕ್ಷ ಕೂಡ ಅಲ್ಲ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇರಬೇಕು. ಈ ತರಹ ಸಾರ್ವಜನಿಕ ಯೋಗ್ಯವಲ್ಲದ ಬಾಷೆ ಬಳಸಬಾರದು ,ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್‌ , ‌ಕಾಂಗ್ರೇಸ್ ಕಾಲದಿಂದ ಇದು ಆರಂಭವಾಗಿದೆ.ಬ್ರಷ್ಟಾಚಾರದಿಂದ ತುಂಬಿ ತುಳುಕಿದ್ದು ಕಾಂಗ್ರೆಸ್ ಪಾರ್ಟಿ ಕರ್ನಾಟಕ ATM ಮಾಡಿಕೊಂಡಿರೋದಕ್ಕೆ ಸಂಕೇತ ಸಿಗುತ್ತಿದೆ. ಟ್ರಾನ್ಸಫರ್‌ಗಳನ್ನು ಮಾಡುತ್ತಿದ್ದಾರೆ, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಮೀಷನ್ ಗಾಗಿ ಕೆಲಸ ನಿಲ್ಲಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಗಮನಿಸ್ತಿದೆ. ಸೂಕ್ತ ಸಮಯದಲ್ಲಿ ಹೋರಾಟ ಮಾಡ್ತೀವಿ. ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ತಿಳಿಸಿದರು.

Share News

About bigtvnews22

Check Also

ಐದು ಕ್ರಿಕೆಟ್ ಬುಕ್ಕಿಗಳಿಗೆ ಪೊಲೀಸರೇ ಸಾಥ್…? ಶಾಕಿಂಗ್ ಅಕ್ರಮ ಜಾಲ ಬಯಲು!

ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದು ಸಾದಾ ವಿಷಯ ಅಲ್ಲ! ಐಪಿಎಲ್ ಸಮಯದಲ್ಲಿ ಜೋರಾಗೋ ಈ ಅಕ್ರಮ ಜಾಲ ಈಗ ಸ್ಫೋಟಕ …

Leave a Reply

Your email address will not be published. Required fields are marked *