ಬೆಂಗಳೂರು : ಹಣ ವರ್ಗವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಡಿಕೆಶಿ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜ್ವರ ಹೆಚ್ಚಾಗಿರುವುದರಿಂದ ದೆಹಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಡಿ ಡ್ರಿಲ್ ಆಗಮಿಸಿದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 ವರ್ಷಗಳ ಹಿಂದಿನ ಬ್ಯಾಂಕ್ ದಾಖಲೆಗಳನ್ನು ಕೇಳಿದ್ದಾರೆ, ಇಡಿಗೆ ಸಂಪೂರ್ಣ ಸಹಕರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ಬರೋಬ್ಬರಿ ನಿನ್ನೆ 6 ತಾಸುಗಳ ಇಡಿ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಡಿಕೆ ಶಿವಕುಮಾರ್ ದಾಖಲಾತಿಗಳನ್ನು ನೀಡಲು ಸಮಯವನ್ನು ಕೇಳಲಾಗಿದೆ. ಒಂದು ಸಾರಿ ಇಡಿ ಕೇಸ್ ಹಾಕಿ ಚಾರ್ಚ್ ಹಾಕಿದ ಮೇಲೆ ಮತ್ತೆ ಕೇಸ್ ಹಾಕುವ ಅವಶ್ಯಕತೆ ಇಲ್ಲ, ತಮ್ಮ ಹುಟ್ಟೂರಿನಲ್ಲಿ ಖರೀದಿ ಮಾಡಿರುವ ಆಸ್ತಿ ಬಗ್ಗೆ ಮತ್ತು ಯಂಗ್ ಇಂಡಿಯಾಕ್ಕೆ ಸಂಬಂಧಪಟ್ಟಂತೆ ಕೂಡ ಮಾಹಿತಿ ಕೇಳಿದೆ ಇದಕ್ಕೆ ದಾಖಲೆ ನೀಡುವಂತೆ ಕೇಳಿದ್ದು ಸಮಯ ಕೇಳಿರುವೆ ಅಂತ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

