ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಮಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗತ್ತಲೇ ಇದೆ, ಈ ರೌಡಿಗಳಿಗೆ ಪೊಲೀಸರ ಭಯ ಅಂತೂ ಇಲ್ಲವೆಯಿಲ್ಲ. ಹಾಡು ಹಗಲೇ ಈ ಕ್ರಿಮಿ ರೌಡಿಗಳು ಗುಂಪು ಕಟ್ಟಿಕೊಂಡು ಬೇರೆ ಗುಂಪಿನ ಜೊತೆ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ದೇವಾಂಗಪೇಟೆಯೆಲ್ಲಿ ನಡೆದಿದೆ.

ಒಂದು ಹುಡುಗಿಯ ವಿಚಾರವಾಗಿ ಏರೆಡು ಗುಂಪಿನ ನಡುವೆ ಮಾರಾ ಮಾರಿ ಆಗಿದೆ. ದಿನಾಂಕ:18/09/2022 ಸುಮಾರಿಗೆ ಸೂರಜ್ ಅನ್ನೋ ಹುಡುಗನಿಗೆ ಕಾರ್ತಿಕ ಕಾಶಿ ಅನ್ನೋ ಹುಡುಗ ನಾಗರಾಜಿನ ಪೋನಿನಿಂದ ಪೋನ್ ಮಾಡಿ ಹುಡುಗಿಯ ವಿಷಯವಾಗಿ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ, ದೇವಾಂಗಪೇಟ್ ಸ್ಮಶಾನಗಟ್ಟಿಯ ಹತ್ತಿರ ಬರುವಂತೆ ಹೇಳಿದ್ದಾನೆ ಆಗ ಸೂರಜ್ ಖಂಡೇಕರ್ ತನ್ನೊಂದಿಗೆ ಇದ್ದ ಮನೋಜ್, ಸಂಪತ್, ವರುಣ, ಶುಭಂ, ತಾಯಾ ಇವರೊಂದಿಗೆ ದೇವಾಂಗಪೇಟ್ ಸ್ಮಶಾನಗಟ್ಟಿಯ ಹತ್ತಿರ ಹೋಗಿದ್ದಾರೆ.
ಆಗ ಕಾರ್ತಿಕ ಮತ್ತು ನಾಗರಾಜ ಗುಂಪು ಹಾಗೂ ಸೂರಜ್ ಗುಂಪು ನಡುವೆ ಮಾರಾಮಾರಿ ಆಗಿದ್ದು ಇಬ್ಬರು ಪರಸ್ಪರ ಹೊಡೆದಾಡಿ ಕೊಂಡು ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ಈ ಒಂದು ಘಟನೆ ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಏರೆಡು ಕಡೆಯಿಂದ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

