Breaking News

ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಸಭ್ಯ ಮಾತನಾಡಿದ ಆರೋಪ : ಹೆಡ್‌ ಕಾನ್‌ಸ್ಟೆಬಲ್‌ ಅಮಾನತು


ಹೊಸಪೇಟೆ (ವಿಜಯನಗರ): ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಸಭ್ಯವಾಗಿ ಮಾತನಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮಾರಪ್ಪ ಎಂಬುವರನ್ನು ಗುರುವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಬೆನ್ನಲ್ಲೇ ಮಾರಪ್ಪ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಆದೇಶ ಹೊರಡಿಸಿದ್ದಾರೆ.

‘ದೂರುದಾರ ಮಹಿಳೆಯು ಹಣದ ವಿಚಾರವಾಗಿ ಚಿಕ್ಕಪ್ಪನ ಮಗಳ ಜೊತೆ ಜಗಳವಾಡಿದ್ದಾರೆ. ಈ ಕುರಿತು ಸೆ. 18ರಂದು ಠಾಣೆಗೆ ದೂರು ಕೊಡಲು ಬಂದಿದ್ದರು. ಮಾರಪ್ಪ ದೂರು ಸ್ವೀಕರಿಸಿ, ‘ನಾಳೆ ಬನ್ನಿ ಎಲ್ಲರನ್ನೂ ಕರೆದು ವಿಚಾರಿಸುತ್ತೇನೆ’ ಎಂದು ಹೇಳಿ ಕಳಿಸಿದ್ದಾರೆ. ಸೆ. 21ರಂದು ಮಾರಪ್ಪ ಮಹಿಳೆಗೆ ಕರೆ ಮಾಡಿ, ಲೈಂಗಿಕ ಸಮ್ಮತಿಗೆ ಒತ್ತಾಯ ಮಾಡಿದ್ದಾರೆ. ಮಹಿಳೆ ದೂರು ಆಧರಿಸಿ ಮಾರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೇವೆಯಿಂದಲೂ ಅಮಾನತುಗೊಳಿಸಲಾಗಿದೆ’ ಎಂದು ಎಸ್ಪಿ ಡಾ. ಅರುಣ್‌ ತಿಳಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *