Breaking News

ಸರ್ಕಾರಿ ಶಾಲೆ ಇದೀಗ ಕೆರೆಯಾಗಿ ನೀರ್ಮಾಣ

ನವಲಗುಂದ: ಮಳೆಗೆ ತಾಲೂಕಿನ ಬಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಸಂಪೂರ್ಣ ಕೆರೆಯಂತಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ದಸರಾ ರಜೆ ಮುಗಿಸಿ ಶಾಲೆಯತ್ತ ಮುಖ ಮಾಡಿದ ಮಕ್ಕಳಿಗೆ ವರುಣ ಸೃಷ್ಟಿಸಿದ ಅವಾಂತರದಿಂದಾಗಿ ಕುಳಿತುಕೊಳ್ಳಲು ಶಾಲೆಯಲ್ಲಿ ಜಾಗ ಇಲ್ಲದ ಪರಿಸ್ಥಿತಿ ಎದುರಾಗಿದೆ. ಸದ್ಯ 1ರಿಂದ 8ನೇ ತರಗತಿಯನ್ನು ಹೊಂದಿರುವಂತಹ ಈ ಶಾಲೆಯಲ್ಲಿ 227 ಮಕ್ಕಳು ಕಲಿಯುತ್ತಿದ್ದಾರೆ.

ಸನ್ 2020-21ನೇ ಸಾಲಿನಲ್ಲಿ ಹೊಸದಾಗಿ ಎರಡು ಕಟ್ಟಡಗಳನ್ನು ಕಟ್ಟಿರುವುದು ಬಿಟ್ಟರೆ ಉಳಿದಂತೆ 6 ಕೊಠಡಿಗಳು 50ವರ್ಷದ ಹಳೆಯ ಕಟ್ಟಡಗಳಾಗಿವೆ. ಸರ್ಕಾರ ಸರ್ಕಾರಿ ಶಾಲೆಗಳ ಮೇಲೆ ಕಾಳಜಿ ತೋರಿಸಬೇಕೆನ್ನುವುದು ಗ್ರಾಮಸ್ತರ ಒತ್ತಾಯವಾಗಿದೆ.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *