ಧಾರವಾಡ: ಬಲವಂತವಾದ ಮತಾಂತರವೇ ಇಸ್ಲಾಂ, ಕ್ರೈಸ್ತ ಸಮೂದಯದ ಉದ್ದೇಶ. ಮತಾಂತರದ ಹಿಂದೆ ದೊಡ್ಡ ಶಕ್ತಿಗಳೇ ಇವೆ. ಸರ್ಕಾರ ಮತಾಂತರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯ ನವನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಕಾಯ್ದೆ ಬೇರು ಬಿಟ್ಟಿದೆ. ಇತ್ತಿಚೆಗೆ ಓರ್ವ ಅರ್ಚಕನನ್ನು ಸಹ ಮತಾಂತರ ಮಾಡಲಾಗಿತ್ತು. ಖತ್ನಾ ಮಾಡಬೇಕು ಅನ್ನುವ ಸಮಯದಲ್ಲಿ ಭಯಪಟ್ಟು ಆತ ಹೊರಗಡೆ ಓಡಿ ಬಂದಿದ್ದಾನೆ. ಇದೀಗ ಮಂಡ್ಯದ ಶ್ರೀಧರನ ಕೈಯಲ್ಲಿ ಪಿಸ್ತೂಲ್ ಕೊಟ್ಟು ವಿಡಿಯೋ ಮಾಡಿಸಿ ಭಯ ಬೀಳಿಸಿದ್ದಾರೆ. ಈ ರೀತಿಯ ಅನೇಕ ದಾಖಲೆ ಇಟ್ಟುಕೊಂಡು ಸಿಗಿಸಿ ಮತಾಂತರ ಮಾಡುತ್ತಿರುವ ಪ್ರಕ್ರಿಯೆ ನಡೆದಿದೆ. ಭಯೋತ್ಪಾದನೆಯಲ್ಲಿ ಸಿಗಿಸುವ ಭಯಕ್ಕೆ ವ್ಯಕ್ತಿ ಅವರು ಹೇಳುವಂತೆ ನಡೆದುಕೊಳ್ಳುತ್ತಾನೆ ಇದು ತನಿಖೆ ಆಗಬೇಕು ಎಂದರು.
ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ನಡೆಯುತ್ತಾ ಬಂದಿದೆ. ಇದೀಗ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದೆ. ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಹಿಂದೂ ಧರ್ಮದ ಶ್ರೀಧರ್ ನನ್ನು ಬಲವಂತವಾಗಿ ಮತಾಂತರ ಮಾಡಿದ್ದಕ್ಕೆ ಆತನೇ ಸ್ವತಃ ದೂರು ದಾಖಲಿಸಿದ್ದಾನೆ. 35 ಸಾವಿರ ರೂ ಆತನ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಎಫ್ ಐಆರ್ ನಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಹುಬ್ಬಳ್ಳಿಯ ನವನಗರದ ಪೋಲಿಸರು 11 ಜನರ ಬಂಧನ ಮಾಡಿದ್ದಾನೆ. ಇದನ್ನು ಬಿಟ್ಟು ಜನರಿದ್ದಾರೆ. ಅಲ್ಲದೇ ದೊಡ್ಡ ಶಕ್ತಿಯೇ ಇದೆ ಎಂದರು.
ಮತಾಂತರ ಹಿಂದೆ ಮುಲ್ಲಾ, ಮೌಲ್ವಿಗಳಿದ್ದಾರೆ. ಮದರಸಗಳು, ಮಸೀದಿಗಳಿವೆ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರಿಯಾದ ರೀತಿಯಲ್ಲಿ ತನಿಖೆ ಕಾರ್ಯ ನಡೆಯಬೇಕು. ಮತಾಂತರ ಕಾಯ್ದೆ ಜಾರಿಗೆ ಮಾಡುವುದು ಅಷ್ಟೇ ಅಲ್ಲ. ಮತಾಂತರ ಮಾಡುವವರಿಗೆ ಉಗ್ರವಾದ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.
ಮತಾಂತರ ಪ್ರಕ್ರಿಯೆ ಇವತ್ತಿಂದು ಅಲ್ಲ, ಸಾವಿರಾರು ವರ್ಷಗಳಿಂದ ಇಸ್ಲಾಂ ಮತ್ತು ಕ್ರೈಸ್ತ ಸಮೂದಾಯ ಮಾಡುತ್ತಾ ಬರುತ್ತಿದೆ. ಬಲವಂತವಾದ ಮತಾಂತರವೇ ಇವರ ಉದ್ದೇಶ. ಅವರ ಧರ್ಮವನ್ನು ವಿಸ್ತಾರ ಮಾಡುವುದೇ ಅವರ ಗುರಿ. ಇದೇ ಸಂಘರ್ಷ ಮತ್ತು ಕೋಮು ಗಲಭೆಗೆ ಕಾರಣವಾಗುತ್ತಿದೆ. ಹಿಂದೂ ಧರ್ಮ, ಯಾವತ್ತಿಗೂ ಯಾರನ್ನು ಮತಾಂತರ ಮಾಡಿಲ್ಲ, ಮಾಡುವುದು ಇಲ್ಲ. ನಮ್ಮ ಹಿಂದೂ ಧರ್ಮ ವಿಚಾರವನ್ನು ಹೇಳುತ್ತಾ ಬಂದಿದೆ ಹೊರತು ಮತಾಂತರ ವ್ಯಾಪಾರೀಕರಣ ಮಾಡಿಲ್ಲ ಎಂದರು
ಇಸ್ಲಾಂ ಮತ್ತು ಕ್ರೈಸ್ತ ಸಮೂದಾಯಗಳು ಆಸೆ ಮತ್ತು ಆಮಿಷ ತೋರಿಸಿ ಮತಾಂತರವನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ಇದು ನವನಗರದ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ. ಈಗಾಗಲೇ ಕೆಲವು ಜನರನ್ನು ಬಂಧನ ಮಾಡಿದ್ದಾರೆ. ಇದು ಅಷ್ಟೇ ಸಾಲದು, ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

