ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರದ ನವಲಗುಂದ , ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ತಾಲ್ಲೂಕುಗಳಲ್ಲಿ ಸಾಕಷ್ಟು ಮಳೆಯಾಗಿ ಬೆಳೆ ಹಾನಿಯಾಗಿದೆ . ಕೇಂದ್ರ ಅಧ್ಯಯನ ತಂಡ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪರಿಹಾರವನ್ನು ನೀಡುತ್ತಿದ್ದಾರೆ ಅದು ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು ನವಲಗುಂದ ಪಟ್ಟಣದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರ ಕಚೇರಿಯಲ್ಲಿ ಮಾತನಾಡಿ ,
ಕೆಲವು ರೈತರಿಗೆ ಎಕರೆಗೆ ಹದಿಮೂರು ಸಾವಿರದ ಆರನೂರು ಹಾಗೂ ಇನ್ನು ಕೆಲವು ರೈತರಿಗೆ ಇಪ್ಪತ್ತೆಳು ಸಾವಿರ ನೀಡುವ ಮೂಲಕ ಪರಿಹಾರದಲ್ಲಿ ತಾರತಮ್ಯ ಆಗಿದೆ . ಕೆಲವು ರೈತರಿಗೆ ಕೊಟ್ಟಿದ್ದಾರೆ ಇನ್ನು ಕೆಲವರಿಗೆ ಕೊಟ್ಟಿಲ್ಲ . ಇದರಿಂದ ಗೊಂದಲದಲ್ಲಿ ಸಿಲುಕುವಂತಾಗಿದೆ .
ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ಎಲ್ಲಾ ರೈತರಿಗೂ ಪರಿಹಾರ ಕೊಡಲು ಮುಂದಾಗಬೇಕು . ಈ ತಾರತಮ್ಯ ಹೋಗಲಾಡಿಸಬೇಕಿದೆ . ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಹಣ ತುಂಬಾ ಕಡಿಮೆ ನೀಡುತ್ತಿದೆ . ಸರಿಯಾಗಿ ಯಾವುದೇ ತಾರತಮ್ಯ ಇಲ್ಲದೆ ಪರಿಹಾರ ನೀಡಬೇಕು ಇಲ್ಲದೆ ಇದ್ದಲ್ಲಿ ಪ್ರತಿಭಟನೆ ಹಾದಿಯನ್ನು ಮುಂದುವೆರೆಸಬೇಕಾಗುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

