Breaking News

ಸಾಲಬಾಧೆ ಬಾರದ ಬೆಳೆ ಹಾನಿ , ಮನನೊಂದ ರೈತ ಆತ್ಮಹತ್ಯೆ

ಕುಂದಗೋಳ : ಸಾಲ ಬಾಧೆ ಹಾಗೂ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ತೀವ್ರವಾಗಿ ಮನನೊಂದಿದ್ದ ಕುಂದಗೋಳ ತಾಲೂಕು ಕೊಡ್ಲಿವಾಡ ಗ್ರಾಮದ ರೈತ ಹನುಮಪ್ಪ ಯಲ್ಲಪ್ಪ ಬಾಲೆಹೊಸೂರ ( 65 ) ಕ್ರಿಮಿನಾಶಕ ಸೇವಿಸಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಮೃತ ರೈತ ಬರದ್ವಾಡ ಕೆನರಾ ಬ್ಯಾಂಕ್ ಶಾಖೆಯಲ್ಲಿ 1 ಲಕ್ಷ 50 ಸಾವಿರ ರೂ.ಸಾಲ ಹೊಂದಿದ್ದರು . ಸಾಲ ಮರುಪಾವತಿಗೆ ಬ್ಯಾಂಕ್ ಒತ್ತಡ ಹೇರಿತ್ತು . ಸ್ವಂತದ 2 ಎಕರೆ 13 ಗುಂಟೆ ಹೊಲದ ಜೊತೆಗೆ ಲಾವಣಿಯಾಗಿ 9 ಎಕರೆ ಹೊಲ ಮಾಡುತ್ತಿದ್ದರು . ಇತ್ತೀಚೆಗೆ ಸುರಿದ ಅತಿವೃಷ್ಟಿಗೆ ಎಲ್ಲಾ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದವು . ಇದರಿಂದ ತೀವ್ರವಾಗಿ ಮನನೊಂದಿದ್ದ ಹನುಮಪ್ಪ ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದರು , ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಗಿತ್ತು , ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ . ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *