Breaking News

ಚೀತಾ ಹೆಲಿಕ್ಯಾಪ್ಟರ್ ಪತನ : ಪೈಲೆಟ್ ಸಾವು


ನವದೆಹಲಿ : ಭಾರತೀಯ ವಾಯುಸೇನೆಯ ಚೀತಾ ಹೆಲಿಕ್ಯಾಪ್ಟರ್ ಇಂದು ಅರುಣಾಚಲ ಪ್ರದೇಶದ ತಾವಂಗ್ ಜಿಲ್ಲೆಯಲ್ಲಿ ಚೀನಾ ಜೊತೆಗಿನ ಗಡಿ ಸಮೀಪ ಪತನಗೊಂಡಿದ್ದು ಹೆಲಿಕ್ಯಾಪ್ಟರ್ ನ ಪೈಲೆಟ್ ಮೃತಪಟ್ಟಿದ್ದಾರೆ.

ಫಾರ್ವರ್ಡ್ ಪ್ರದೇಶದಲ್ಲಿ ನಿಯಮಿತ ಹಾರಾಟ ನಡೆಸುತ್ತಿರುವ ವೇಳೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಎ ಎಸ್ ವಾಲಿಯ ಹೇಳಿದ್ದಾರೆ.

ಹೆಲಿಕ್ಯಾಪ್ಟರ್ ನಲ್ಲಿ ಇಬ್ಬರು ಪೈಲೆಟ್ ಗಳಿದ್ದರೂ ಹೆಲಿಕ್ಯಾಪ್ಟರ್ ಪತನಗೊಂಡ ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಗಂಭೀರ ಗಾಯಗೊಂಡಿದ್ದ ಒಬ್ಬರು ಮೃತಪಟ್ಟರೆ ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *