Breaking News

ದನ ಸಾಗಾಟ ವಿಚಾರದಲ್ಲಿ ತಲ್ವಾರ್ ನಿಂದ ಹಲ್ಲೆ : ಇಬ್ಬರು ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ : ದನ ಸಾಗಾಟದ ಬಾಡಿಗೆ ವಿಚಾರಕ್ಕೆ ಗೆಳೆಯರ ನಡುವೆ ಕಲಹ ಏರ್ಪಟ್ಟು ಸಹೋದರರಿಬ್ಬರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ .

ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯ ಹಸೈ ಮಲಾದಲ್ಲಿ ದನ ಸಾಗಾಟದ ಬಾಡಿಗೆ ವಿಚಾರಕ್ಕೇ ಗೆಳೆಯರ ನಡುವೆ ಮಾತಿಗೆ ಮಾತು ಬೆಳೆದು ಬೇಪಾರಿ ಸಹೋದರರ ಮೇಲೆ ಆವೇಜ್ ಹಾಗೂ ಉವೇಜ್ ಎಂಬ ಸಹೋದರರ ಮೇಲೆ ತಲ್ವಾರ್ ನಿಂದ ಕೈ , ಕಾಲು , ಹಾಗೂ ಬೆನ್ನಿಗೆ ಹಲ್ಲೆ ಮಾಡಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು , ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .

ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಿಮ್ಸ್ ಆಸ್ಪತ್ರೆಗೆ ಎಸಿಸಿ ಆರ್ ಕೆ ಪಾಟೀಲ್ ಭೇಟಿಯನ್ನು ನೀಡಿ ಗಾಯಾಳುಗಳಿಂದ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ , ಆದ್ರೆ ಘಟನೆಯ ಕುರಿತು ಆವೇಜ್ ಹಾಗೂ ಉವೇಜ್ ತಂದೆ ಇದು ದ್ವೇಷಕ್ಕಾಗಿ ನಡೆದ ಹಲ್ಲೆ ಎಂದು ಹೇಳಿಕೊಂಡಿದ್ದಾರೆ , ಸದ್ಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯ ಹಸೈ ಮಲಾ ದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ . ಘಟನೆಗೆ ಸಂಬಂಧಿಸಿದಂತೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸ್ ತನಿಕೆಯಿಂದಲೇ ಘಟನೆಗೆ ನಿಜವಾದ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *