Breaking News

ಜಾನುವಾರುಗಳಿಗೆ ಚರ್ಮಗಂಟು ರೋಗ : ಗೋಟ್‌ ಪಾಕ್ಸ್‌ ಲಸಿಕೆ ಅಭಿಯಾನ ಆರಂಭ


ದಾವಣಗೆರೆ: ಚರ್ಮಗಂಟು ರೋಗ (ಲಂಪಿ ಸ್ಕಿನ್‌ ಡಿಸೀಸ್‌) ಹರಡುವುದನ್ನು ನಿಯಂತ್ರಿಸಲು 50 ಸಾವಿರ ಗೋಟ್‌ ಪಾಕ್ಸ್‌ ಲಸಿಕೆ ಜಿಲ್ಲೆಗೆ ಬಂದಿದ್ದು, ಲಸಿಕೆ ಹಾಕುವ ಅಭಿಯಾನ ಆರಂಭಗೊಂಡಿದೆ.

134 ಜಾನುವಾರುಗಳು ಸಾವಿಗೀಡಾಗಿದ್ದವು. ವಿಪರೀತ ಜ್ವರ, ಕಣ್ಣಲ್ಲಿ ನೀರು, ಮೈಯಲ್ಲಿ ಗಂಟು ಉಂಟಾಗುವ ಈ ರೋಗವನ್ನು ನಿಯಂತ್ರಿಸಲು ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆದಿತ್ತು. ಶೀಪ್‌ ಪಾಕ್ಸ್‌(ಕುರಿ ಜ್ವರ), ಗೋಟ್‌ ಪಾಕ್ಸ್‌ಗೆ (ಮೇಕೆ ಜ್ವರ) ಕಾರಣವಾಗುವ ವೈರಾಣುವೇ ಈ ರೋಗಕ್ಕೂ ಕಾರಣ ಎಂಬುದನ್ನು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ದೃಢಪಡಿಸಿದ್ದರಿಂದ ಗೋಟ್‌ಪಾಕ್ಸ್‌ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಜಿಲ್ಲೆಗೆ 50 ಸಾವಿರ ಲಸಿಕೆ ಬಂದಿದೆ.

‘ಲಸಿಕೆಯನ್ನು ತಾಲ್ಲೂಕುವಾರು ಹಂಚಲಾಗಿದೆ. ಆಯಾ ತಾಲ್ಲೂಕುಗಳಲ್ಲಿ ಸ್ಥಳೀಯ ಪಶುವೈದ್ಯರ ಮೂಲಕ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ತಿಳಿಸಿದರು.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *