Breaking News

ಅಪ್ಪುಗೆ ಬಿಳಿ ಬಣ್ಣದ ಬಟ್ಟೆಗಳಂದ್ರೆ ಇಷ್ಟ : ನಟ ರಾಘವೇಂದ್ರ ರಾಜ್ ​​ಕುಮಾರ್​​


ಬೆಂಗಳೂರು: ಅಪ್ಪುಗೆ ಬಿಳಿ ಬಣ್ಣದ ಬಟ್ಟೆಗಳಂದ್ರೆ ಇಷ್ಟ ಹೀಗಾಗಿ ಇಡೀ ರಾಜ್​​ ಫ್ಯಾಮಿಲಿ ಇವತ್ತು ವೈಟ್​ ಬಟ್ಟೆ ತೊಡಲಿದೆ ಎಂದು ನಟ ರಾಘವೇಂದ್ರ ರಾಜ್ ​​ಕುಮಾರ್​​ ಹೇಳಿದ್ಧಾರೆ. ಅರಮನೆ ಮೈದಾನದಲ್ಲಿ ನಟ ರಾಘವೇಂದ್ರ ರಾಜ್​​ಕುಮಾರ್​​ ಮಾತನಾಡಿ ಪುನೀತ್​​ ರಾಜ್ ​ಕುಮಾರ್​​ ಗೆ ಯಾವುದೇ ಭೇದ-ಭಾವ ಇರಲಿಲ್ಲ.

ಅಪ್ಪಾಜಿಗೆ ಬಿಳಿ ಬಟ್ಟೆ ಅಂದ್ರೆ ತುಂಬಾ ಇಷ್ಟ, ಅಪ್ಪುಗೂ ಬಿಳಿ ಬಣ್ಣ ಬಟ್ಟೆಗಳಂದ್ರೆ ಇಷ್ಟ. ಇದಕ್ಕಾಗಿಯೇ ನಾವೆಲ್ಲಾ ಇವತ್ತು ಬಿಳಿ ಬಟ್ಟೆ ಹಾಕಿದ್ದೇವೆ ಎಂದು ತಿಳಿಸಿದ್ಧಾರೆ.

ಇನ್ನೂ ಅಪ್ಪು ಗಾಯಕನಾಗಿ ಹಾಡಿದ ಹಾಡನ್ನ ನಾನು ಹಾಡುತ್ತೇನೆ. ಅವನ ಜೊತೆಗಿನ ಒಡನಾಟ ಹೇಳಿ ನಾನು ಹಾಡನ್ನ ಹಾಡುತ್ತೇನೆ. ಶಿವಣ್ಣ ಡ್ಯಾನ್ಸ್ ಮಾಡ್ತಾರೆ. ಕುನಾಲ್ ಗಾಂಜಾವಾಲ್ ಎಲ್ಲರು ಇರ್ತಾರೆ. ಹೃದಯ ಪೂರ್ವಕವಾಗಿ ನೀವು ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಡುವಂತೆ ಮನವಿ ಮಾಡ್ತೀನಿ. ಅಪ್ಪು ಹೋದಾಗಿನಿಂದ ಏನು ಸಮಸ್ಯೆ ಆಗದೆ ಹಾಗೇ ಸಹಕಾರ ನೀಡುತ್ತಾ ಬಂದಿದ್ದಿರಾ. ಇವತ್ತು ಕೂಡಾ ನಮಗೆ ಸಹಕಾರ ಕೊಡಿ. ಎಲ್ಲರು ಬನ್ನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ. ಇದು ವಿಶೇಷವಾಗಿ ಅಭಿಮಾನಿಗಳ ಕಾರ್ಯಕ್ರಮ ಎಂದು ರಾಘಣ್ಣ ಹೇಳಿದ್ದಾರೆ..

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *