ನವಲಗುಂದ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಧ್ರುವರಾಜ ಪಾಟೀಲ ವರ್ಗಾವಣೆಗೊಂಡದ್ದರಿಂದ ಠಾಣಾ ಸಿಬ್ಬಂದಿ ಹಾಗೂ ಊರಿನ ಪ್ರಮುಖರಿಂದ ಬೀಳ್ಕೊಡುವ ಸಮಾರಂಭ ಜರುಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಧ್ರುವರಾಜ ಪಾಟೀಲ ಅವರು ನವಲಗುಂದ ಊರು ಪುಣ್ಯಭೂಮಿ ಐತಿ, ನಾನು ಕರ್ತವ್ಯಕ್ಕೆ ಹಾಜರಾಗಿ ಬಂದ 15 ದಿನದಲ್ಲಿ ರಾಷ್ಟ್ರಪತಿ ಪದಕ ಸಿಕ್ಕಿತ್ತ. ವರ್ಗಾವಣೆ ಬೀಳ್ಕೊಡುಗೆಗೆ ನೀವೆಲ್ಲರೂ ಇಷ್ಟು ಜನರು ಸೇರಿದ್ದಿರಿ ಅಂದರೆ ನಾನು ಉತ್ತಮ ಆಡಳಿತ ನೀಡಿದ್ದೇನೆ ಎಂಬ ಖುಷಿ ನನಗೆಯಿದೆ, ಆದರೆ ಅಧಿಕಾರಿಗಳ ವರ್ಗಾವಣೆ ಅನಿವಾರ್ಯ ಇಷ್ಟು ದಿವಸಗಳ ಕಾಲ ನವಲಗುಂದ ತಾಲೂಕಿನ ಜನತೆ ತೋರಿದ ಪ್ರೀತಿ, ವಿಶ್ವಾಸ ನಾನೆಂದು ಮರೆಯುವುದಿಲ್ಲ ಎಂದರು.
ಈ ವೇಳೆ ಠಾಣೆ ಸಿಬ್ಬಂದಿ ಸೇರಿದಂತೆ ನಗರದ ಪ್ರಮುಖರು ಸನ್ಮಾನಿಸಿ ಬೀಳ್ಕೊಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news





