Breaking News

55 ಕ್ವಿಂಟಲ್ ತೂಕದ ಆನೆ ಹಾಗೂ ಅಂಬಾರಿ ತುಲಾಭಾರ ಮಾಡುವ ಮೂಲಕ ಶಿರಹಟ್ಟಿ ಫಕ್ಕಿರ ಸಿದ್ದರಾಮರ ಅಮೃತ ಮಹೋತ್ಸವ ವಿಜೃಂಭಣೆಯಿಂದ ಮಾಡಲಾಗುವುದು…..

ಹುಬ್ಬಳ್ಳಿ: 55 ಕ್ವಿಂಟಲ್ ತೂಕದ ಆನೆ ಹಾಗೂ ಅಂಬಾರಿ ತುಲಾಭಾರ ಮಾಡುವ ಮೂಲಕ ಶಿರಹಟ್ಟಿ ಫಕ್ಕಿರ ಸಿದ್ದರಾಮರ ಅಮೃತ ಮಹೋತ್ಸವ ವಿಜೃಂಭಣೆಯಿಂದ ಮಾಡಲಾಗುವುದು ಎಂದು ಶಿರಹಟ್ಟಿ ಫಕ್ಕಿರ ಸಂಸ್ಥಾನಮಠದ ಶ್ರೀ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಶಿರಹಟ್ಟಿ ಫಕ್ಕಿರ ಸಿದ್ದರಾಮ ಸ್ವಾಮೀಜಿ ಅವರ 75ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ ನಗರದ 108 ಸಮಾಜದ ಮುಖಂಡರು ಆಗಮಿಸಿ ಸಲಹೆ ಸೂಚನೆ ನೀಡಿದರು. ಜನೇವರಿ 10 ರಿಂದ ಭಾವೈಕತ್ಯೆ ರಥ ಯಾತ್ರೆ ಹುಬ್ಬಳ್ಳಿಯಿಂದ ಆರಂಭಗೊಳ್ಳುತ್ತಿದ್ದು, 20 ದಿನಗಳ ಕಾಲ ಈ ಭಾವೈಕ್ಯತೆ ರಥ ಯಾತ್ರೆ ನಗರದೆಲ್ಲೆಡೆ ಸಂಚಾರ ಮಾಡಲಿದೆ. ಫೆ.1 ರಂದು ಆನೆ ಅಂಬಾರಿ ಸೇರಿದಂತೆ ತುಲಾಬಾರ ಸೇರಿದಂತೆ ದೊಡ್ಡ ಕಾರ್ಯಕ್ರಮ ನೆಹರು ಮೈದಾನದಲ್ಲಿ ನಡೆಯಲಿದೆ ಎಂದರು.

ಶ್ರೀ ಮಠದ ಆನೆಗೆ 60 ವರ್ಷ, ಶ್ರಿಗಳಿಗೆ 75 ವರ್ಷ ಆನೆಯ ಷಷ್ಠಿಪೂರ್ತಿ ಹಾಗೂ ಗುರುಗಳ ಅಮೃತ ಮಹೋತ್ಸವ ಕಾರ್ಯಕ್ರಮ ಮೇಳೆಯಿಸಿ ಮಾಡಲಾಗುತ್ತದೆ. ಆನೆಯ ಮೇಲೆ ಅಂಬಾರಿ, ಅಂಬಾರಿಯಲ್ಲಿ ಫಕ್ಕಿರೇಶ್ವರ ಮೂರ್ತಿ ಇಟ್ಟು ತುಲಾಬಾರ ಮಾಡಬೇಕೆಂದುಕೊಂಡಿದ್ದೇವೆ. ಅದಕ್ಕಾಗಿ 73 ಲಕ್ಷ 40 ಸಾವಿರ ನಾಣ್ಯಗಳು ಬೇಕಾಗುತ್ತದೆ. ಆನೆ ಅಂಬಾರಿ ಸೇರಿ 55 ಕ್ವಿಂಟಲ್ ಇದ್ದು, ಅದರ ತೂಕದ 10 ರೂ.ಗಳ ನಾಣ್ಯವನ್ನು ಅದರಲ್ಲಿ ಇಡಲಾಗುವ ತಿರ್ಮಾನ ಮಾಡಲಾಗಿದ್ದು ಅದರಿಂದ ಬರುವ ಹಣವನ್ನು ಶಿಕ್ಷಣಕ್ಕೆ ಬಳಸಲಾಗುವುದು ಎಂದರು. 44 ಅಡಿ ಉದ್ದ 30 ಅಡಿ ಎತ್ತರದ ತಕ್ಕಡಿ ಸಿದ್ದಪಡಿಸಲಾಗುತ್ತಿದ್ದು, ಫೆ.1 ರಂದು ತುಲಾಭಾರ ಕಾರ್ಯಕ್ರಮ ನೆರವೇರಿಸಲಿದ್ದೇವೆ. ಅದಕ್ಕಾಗಿ ಇಂದು ಎಲ್ಲ ಸಮಾಜದ ಮುಖಂಡರ ಸಭೆ ನಡೆಸಲಾಗಿದ್ದು, ಎಲ್ಲರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ವಿಜೃಂಭಣೆಯಿಂದ ಮಾಡಲಾಗುವುದು ಎಂದು ಅವರು ಹೇಳಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *