Breaking News

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನೆ

ಹುಬ್ಬಳ್ಳಿ : UUCMS ತಂತ್ರಾಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು, ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ. ವಿದ್ಯಾರ್ಥಿಗೆ ದೊರೆಯುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು, ವಂಚಿತರಾಗುವಂತೆ ಆಗಿದೆ, ಹಾಗೂ ಫಲಿತಾಂಶವನ್ನು ವಿಳಂಬವಾಗಿ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಈಗಾಗಲೆ ನಡೆದಿರುವ ಪರೀಕ್ಷೆಗಳ ಮೌಲ್ಯಮಾಪನವನ್ನು ನಡೆಸಿ ಕೂದಲೆ ಫಲಿತಾಂಶವನ್ನು ನೀಡುವ ಅಗತ್ಯವಿದೆ. ಮೊದಲ ವರ್ಷದ ಫಲಿತಾಂಶ ತಿಳಿಯದ ವಿದ್ಯಾರ್ಥಿಗಳು ಗೊಂದಲದಲ್ಲಿ ಇರುವಂತಾಗಿದೆ. ಕಳೆದ ಎರಡು ವರ್ಷಗಳಿಂದ ಕೆಲವು ತಾಂತ್ರಿಕ ದೋಷಗಳಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಇನ್ನು ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ ರಾಜ್ಯ ಸರ್ಕಾರವು ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೆ ಬಿಡುಗಡೆ ಮಾಡಬೇಕು.

ವಿದ್ಯಾರ್ಥಿಗಳು, ಈಗಾಗಲೆ ತಮ್ಮ ಪೂರ್ಣ ಕಾಲೇಜು ಶುಲ್ಕವನ್ನು ಪಾವತಿಸಿದ್ದು ವಿದ್ಯಾರ್ಥಿಗಳು ತಮ್ಮ ಅಗತ್ಯತೆಗಳನ್ನು ಪಡೆಯಲು ಹೊರೆಯಾಗುತ್ತಿದೆ.

ಕಾರಣ ರಾಜ್ಯ ಸರ್ಕಾರ ಈ ಕೂಡಲೆ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕು. ಹಲವಾರು ವಿದ್ಯಾರ್ಥಿಗಳು ವೇತನದ ನಿರೀಕ್ಷೆಯಲ್ಲಿದ್ದಾರೆ,ಈ ಎಲ್ಲಾ ಸಮಸ್ಯೆಗಳನ್ನು ಸಪಡಿಸುವ ದೃಷ್ಟಿಯಿಂದ ಈ ಕೂಡಲೆ ಸರ್ಕಾರ ಸಂಭಂದಪಟ್ಟ ಇಲಾಖೆಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಗ್ರಹಿಸುತ್ತದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *