ಹುಬ್ಬಳ್ಳಿಯಲ್ಲಿ
ಸಿಎಂ ಕುಮಾರಸ್ವಾಮಿಯವರಿಗೇ ಏನಾದ್ರೂ ನಾಚಿಕೆ ಮಾನ-ಮರ್ಯಾದೆ ಇದ್ರೇ ಕೂಡಲೇ ಕೊಟ್ಟ ಮಾತಿನಂತೆಯೇ ಎಸಿಬಿಯನ್ನ ರದ್ದುಪಡಿಸ್ಪೇಕು ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಕಿಡಿಕಾರಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆಯೇ ಎಸಿಬಿ ರದ್ದುಗೊಳಿಸ್ಬೇಕು. ನ್ಯಾ. ಸಂತೋಷ ಹೆಗ್ಡೆ ವರದಿಯನ್ನ ಜಾರಿಗೆ ತರೋದಕ್ಕೆ ಎಸ್ಐಟಿಗೆ ಆದೇಶಿಸ್ಪೇಕು. ಲೋಕಾಯುಕ್ತವನ್ನ ಇನ್ನಷ್ಟು ಬಲಗೊಳಿಸ್ಬೇಕು. 2013-14ರಲ್ಲಿ ನಡೆದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಅಕ್ರವಾಗಿದೆ. ಬೇರೆ ಬೇರೆ ಕೋರ್ಟ್ ಗಳಲ್ಲಿ ಕೆಲಸ ಮಾಡ್ತಿರೋ 61 ಎಪಿಪಿಗಳ ವಿರುದ್ಧ ಲೋಕಾಯುಕ್ತರು ಈಗಾಗಲೇ ದೋಷಾರೋಪಪಟ್ಟಿ ಸಲ್ಲಿಸಿದಾರೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನೇಮಕವಾಗಿರೋ ಎಲ್ಲ ಎಪಿಪಿಗಳನ್ನ ಕೂಡಲೇ ಸೇವೆಯಿಂದ ಅಮಾನತು ಮಾಡ್ಬೇಕು ಅಂತ ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದಾರೆ.
ಎಸ್.ಆರ್ ಹಿರೇಮಠ, ಮುಖ್ಯಸ್ಥ, ಸಮಾಜ ಪರಿವರ್ತನಾ ಮುಖ್ಯಸ್ಥ. ಬಿಗ್ ಟಿವಿ ನ್ಯೂಸ್ ಹುಬ್ಬಳ್ಳಿ
bigtvnews | Hubli Dharwad News | Kannada News | Karnataka News Hubli News | News In Hubli | Local news





