ಬೆಂಗಳೂರಲ್ಲಿ ಲವರ್ ಗೆ ಬೆಂಕಿ ಹಾಕಿ ಮರ್ಡರ್ ಮಾಡಿದ ಕೇಸ್ ತನಿಖೆ ಚುರುಕುಗೊಂಡಿದ್ದು, ಹಂತಕಿ ಪ್ಲಾನ್ ಕೇಳಿ ವಿಚಾರಣೆ ವೇಳೆ ಪೊಲೀಸರೇ ಶಾಕ್ ಆಗಿದ್ದಾರೆ. ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತಾ ಕೈಕಾಲು ಕಟ್ಟಿ ಬಟ್ಟೆ ಬಿಚ್ಚಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರಿಯತಮೆ ಪ್ರೇಮಾಳಿಂದ ಕೊಲೆಯಾದ ಕಿರಣ್, ಈಕೆಯನ್ನ ಅವಾಯ್ಡ್ ಮಾಡಿ ಮಾಜಿ ಲವರ್ ಜೊತೆಗೆ ಸಂಪರ್ಕದಲ್ಲಿದ್ದ, ಕೊಲೆಗೆ ಇದೇ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರೇಮಾ ಜೊತೆಗೆ ಕಿರಣ್‌ಗೆ 2 ವರ್ಷದಿಂದ ಪ್ರೇಮವಾಗಿತ್ತು. ಆದ್ರೆ, ಇದ್ದಕ್ಕಿದ್ದಂತೆ ಪ್ರೇಮಾಳನ್ನ ಅವಾಯ್ಡ್ ಮಾಡಲು ಶುರು ಮಾಡಿದ್ದನು. ಕಿರಣ್ ಮಾಜಿ ಪ್ರಿಯತಮೆಯೊಂದಿಗೆ ಸಂಪರ್ಕದಲ್ಲಿದ್ದನು. ಇತ್ತೀಚೆಗೆ ಆಕೆಯ ಬರ್ತ್ಡೇ ಕೂಡ ಸೆಲಬ್ರೇಷನ್ ಮಾಡಿ ಫೋಟೋಸ್ ಕೂಡ ತೆಗೆದುಕೊಂಡಿದ್ದನು. ಇದನ್ನ ನೋಡಿದ ಪ್ರೇಮಾ ಕಿರಣ್ ಜೊತೆಗೆ ಗಲಾಟೆ ಮಾಡಿದ್ದಳು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

