Breaking News

ಹುಬ್ಬಳ್ಳಿಯಲ್ಲಿ ಬನಾರಸ್ ಸಿನಿಮಾ ವೀಕ್ಷಿಸಿದ ಝೈನದ ಖಾನ್

ಹುಬ್ಬಳ್ಳಿ: ಬನಾರಸ್ ಸಿನಿಮಾ ಭರ್ಜರಿ ಎಂಟ್ರಿಕೊಟ್ಟಿದ್ದು, ಚೊಚ್ಚಲ ಎಂಟ್ರಿಯಲ್ಲೇ ಝೈನದ ಖಾನ್ ಜೈಕಾರ ಹಾಕಿಸಿಕೊಂಡಿದ್ದಾರೆ. ಇಂದು ಚಿತ್ರದ ತಂಡ ಹುಬ್ಬಳ್ಳಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಇಲ್ಲಿನ ಸ್ಟೇಷನ್‌ ರಸ್ತೆಯ ಚಂದ್ರಕಲಾ ಚಿತ್ರಮಂದಿರದಲ್ಲಿ ಝೈನ್ ಖಾನ್ ಫ್ಯಾನ್ ಇಂಡಿಯಾ ಸಿನಿಮಾಗೆ ಭರ್ಜರಿ ವೆಲ್ ಕಮ್ ಮಾಡಲಾಗಿದೆ. ಥೀಯೇಟರ್ ಗಳ ಮುಂದೆ ಫ್ಯಾನ್ಸ್ ಕಿಕ್ಕಿರಿದು ಸೇರಿ ಪಟಾಕಿ ಸಿಡಿಸಿ, ಚಿತ್ರದ ನಾಯಕ ಹಾಗೂ ನಾಯಕಿಗೆ ಹೂಮಳೆ ಸೂರಿಸಿದ್ದಾರೆ.

ಇನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಮೊದಲ ಸಿನಿಮಾವಾಗಿದೆ‌‌. ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಬನಾರಸ್ ನದ್ದೆ ಸದ್ದು ಮಾಡಿದೆ. ಪ್ರೇಕ್ಷಕರ ಜೊತೆಗೆ ಚಿತ್ರ ಮಂದಿರದಲ್ಲಿ ಚಿತ್ರ ವಿಕ್ಷೀಸಿ ನಂತರ ಮಾತನಾಡಿದ ನಾಯಕ ನಟ ಝೈದ್ ಖಾನ್, ಬನಾರಸ್ ಚಿತ್ರವನ್ನು ರಾಜ್ಯದ ಜನತೆ ಇಷ್ಟಪಟ್ಟಿದೆ. ಎಲ್ಲೆಡೆ ಪ್ರವಾಸ ನಡೆಸುತ್ತಿದ್ದೇನೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ‌‌. ನಾನು ಚಿಕ್ಕವನಿಂದಲೂ ನಟನಾಗುವ ಆಸೆ ಹೊಂದಿದ್ದೆ. ಅದರಂತೆ ನಟನೆ ಮಾಡುತ್ತಿದ್ದೇನೆ. ಜನರು ನನಗೆ ಬೆಂಬಲಿಸುತ್ತಿದ್ದಾರೆ ಇದು ಖುಷಿ ತಂದಿದೆ ಎಂದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *