Breaking News

500+ ನಕಲಿ ಪ್ಯಾನ್ ಕಾರ್ಡ್; 27 ಕೋಟಿ ವಂಚಿಸಿದವ ಅರೆಸ್ಟ್!

ಫೆಡರಲ್ ಬ್ಯಾಂಕ್‌ನದೇ ಆಯಪ್ ಮೂಲಕ ಶಿರಾಜುಲ್ ಇಸ್ಲಾಂ ಈ ವಂಚನೆ ನಡೆಸಿದ್ದ. ಬ್ಯಾಂಕ್ ಗ್ರಾಹಕರ ಗುರುತಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಾಲ ಪಡೆಯುವುದೇ ಇವರ ವಂಚನೆಯ ಗುರಿಯಾಗಿತ್ತು. ಮೊದಲು ಉತ್ತಮ ಸಿಬಿಲ್ ಸ್ಕೋರ್ ಇರುವವರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗುತ್ತಿತ್ತು. ಅವರ ಪ್ಯಾನ್ ಕಾರ್ಡ್ ಅನ್ನು ನಕಲಿಯಾಗಿ ತಯಾರಿಸಿ, ವಿಳಾಸವನ್ನು ಸರಿಯಾಗಿ ನೀಡಿ, ಫೋಟೋವನ್ನು ಮಾತ್ರ ವಂಚಕನ ತಂಡದ ಸದಸ್ಯನೊಬ್ಬನದ್ದು ಹಾಕಲಾಗುತ್ತಿತ್ತು. ಕೆವೈಸಿ ಪರಿಶೀಲನೆಗಾಗಿ ವಿಡಿಯೋ ಕಾಲ್ ಬಂದಾಗ, ಪ್ಯಾನ್ ಕಾರ್ಡ್‌ನಲ್ಲಿ ಫೋಟೋ ಇರುವ ವಂಚಕನೇ ಹಾಜರಾಗುತ್ತಿದ್ದ. ಈ ರೀತಿ ಸುಮಾರು 27 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದಾನೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *