ಬೆಂಗಳೂರು: ಫ್ಲೆಕ್ಸ್, ಬ್ಯಾನರ್ ವಿಚಾರದ ಬಳಿಕ ಹೈಕೋರ್ಟ್ ಮತ್ತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ಗರಂ ಆಗಿದೆ. ನಗರದ ರಸ್ತೆಯ ಅವ್ಯವಸ್ಥೆಯ ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ವಾರ್ನಿಂಗ್ ನೀಡಿದೆ. ನಗರದ ರಸ್ತೆಗಳ ಎಲ್ಲಾ ಗುಂಡಿಗಳನ್ನು ಇಂದು ಸಂಜೆಯೊಳಗೆ ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ನ ಆದೇಶದಿಂದ ಪಾಲಿಕೆ ನಿನ್ನೆ ರಾತ್ರೋರಾತ್ರಿ ನಗರದ ರಸ್ತೆಯ ಗುಂಡಿಗಳನ್ನು ಮುಚ್ಚಲು ಮುಂದಾಗಿದೆ. ಮೆಜೆಸ್ಟಿಕ್, ಓಕಳಿಪುರ ಸುತ್ತಲಿನ ರಸ್ತೆ, ಯಶವಂತಪುರ, ಬಳ್ಳಾರಿ ಮುಖ್ಯ ರಸ್ತೆ, ಕೋರಮಂಗಲ ಸೇರಿದಂತೆ ಹಲವೆಡೆ ರಸ್ತೆಗಳ ದುರಸ್ಥಿ ಮಾಡಲಾಗಿದೆ.
ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ನಿನ್ನೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಸಂಜೆಯೊಳಗೆ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು. ಅಲ್ಲದೇ ಸಂಜೆಯೊಳಗೆ ಮೆಷರ್ಮೆಂಟ್ ಬುಕ್, ಕಾಮಗಾರಿ ಆದೇಶ, ಅಳತೆ, ಅಂದಾಜುಪಟ್ಟಿಯನ್ನು ಸಲ್ಲಿಸುವಂತೆಯೂ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಬೀದಿಗಿಳಿದು ನಗರದ ಹಲವು ರಸ್ತೆಗಳ ಗುಂಡಿಗೆ ಕಾಂಕ್ರೀಟ್ ಹಾಕಿಸಿ ದುರಸ್ಥಿ ಕಾರ್ಯ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





