Breaking News

ರಾಜನಾಥ್‌ ಸಿಂಗ್‌ ಮಣಿಪಾಲಕ್ಕೆ ಆಗಮನ : ಪೋಲಿಸ್ ರಿಂದ ಬಂಧುಬಸ್ತ್


ಉಡುಪಿ: ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಶುಕ್ರವಾರ ಮಾಹೆ ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಲಿದ್ದು, ಆ ಪ್ರಯುಕ್ತ ನಗರದಲ್ಲಿ ಗುರುವಾರವೇ ಪೊಲೀಸರು ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್‌ ಮಾಡಿದರು.

ಆದಿ ಉಡುಪಿಯ ಹೆಲಿಪ್ಯಾಡ್‌ನಿಂದ ಮಣಿಪಾಲದ ವರೆಗೆ ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್‌ ಮಾಡಲಾಯಿತು.
ಈ ಕಾರಣಕ್ಕೆ ನಗರದಾದ್ಯಂತ

ಟ್ರಾಫಿಕ್‌ ದಟ್ಟನೆ ಉಂಟಾಯಿತು. ಈಗಾಗಲೇ ಸ್ಟೇಟ್‌ ಇಂಟೆಲಿಜೆನ್ಸ್‌, ಎನ್‌ಎಸ್‌ಜಿ, ಯುಪಿ ಪೊಲೀಸರು ಉಡುಪಿಯಲ್ಲಿ ಬೀಡುಬಿಟ್ಟಿದ್ದಾರೆ. 100ರಿಂದ 150 ಮಂದಿ ಜಿಲ್ಲೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರವರೆಗೆ ನಗರದಾದ್ಯಂತ ಬಿಗು ಪೊಲೀಸ್‌ ಭದ್ರತೆ ಇರಲಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *