Breaking News

ಯಶ್​ ಬರ್ತ್​ಡೇಗೆ ಬ್ಯಾನರ್​ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮೂವರು ಯುವಕರು ಸಾವು

ಗದಗ ಇಂದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಹುಟ್ಟುಹಬ್ಬದ ದಿನದ ಅಂಗವಾಗಿ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ಯುವಕರು ವಿದ್ಯುತ್ ಶಾಕ್ ತಗುಲಿ (Electric Shock) ಸಾವನ್ನಪ್ಪಿದ್ದಾರೆ. ಈ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ (Lakshmeshwara, Gadag) ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.ಹನಮಂತ ಹರಿಜನ್ (21) ಮುರಳಿ ನಡವಿನಮನಿ (20) ಮತ್ತು ನವೀನ್ ಗಾಜಿ(19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಶ್ ಮೇಲಿನ ಅಭಿಮಾನದಿಂದ ಮಧ್ಯರಾತ್ರಿ ಬರ್ತ್ ಡೇ ಪ್ಲಾನ್ ಮಾಡಿಕೊಂಡಿದ್ದರು.ಈ ವೇಳೆ ಯಶ್ ಫೋಟೋವುಳ್ಳ ಬೃಹತ್ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಗೋವಾದಲ್ಲಿ ಬರ್ತ್ ಡೇ ಆಚರಣೆರಾಕಿಭಾಯ್ 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ದಿನ ಯಶ್ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಬದಲಿಗೆ ಗೋವಾದಲ್ಲಿ ತಮ್ಮ ಕುಟುಂಬದ ಜೊತೆ ಖಾಸಗಿಯಾಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳಲಿದ್ದಾರೆ.ಇತ್ತೀಚಿಗೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೈಟಲ್ ಟೀಸರ್ ಅನೌನ್ಸ್ ಆಗಿದ್ದು, ಯಶ್ 19ನೇ ಚಿತ್ರಕ್ಕಾಗಿ ಕನ್ನಡಿಗರಷ್ಟೇ ಅಲ್ಲ ಇಡೀ ಇಂಡಿಯಾ ಕಾದು ಕುಂತಿದೆ.ಜೀವದ ಹಂಗು ತೊರೆದು ಪ್ರಯಾಣ!ಶಕ್ತಿ ಯೋಜನೆ ಎಫೆಕ್ಟ್​​ನಿಂದ ಗದಗದಲ್ಲಿ ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಪ್ರಯಾಣಿಕರು ಜೀವದ ಹಂಗು ತೊರೆದು ಬಾಗಿಲಿನಲ್ಲಿ ನಿಂತು ಡೇಂಜರ್​ ಪ್ರಯಾಣ ಮಾಡುವಂತಾಗಿದೆ..ಗದಗ ಜಿಲ್ಲೆಯ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ, ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಬಸ್​ಗಳ ಕೊರತೆಯಿಂದಾಗಿ ಪ್ರಯಾಣಿಕರು ನಿತ್ಯ ಪರದಾಡ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.ಅಲ್ಲದೇ ಎಲ್ಲಿಂದರಲ್ಲಿ ಬಸ್​ಗಳು ಕೆಟ್ಟು ನಿಲ್ಲುತ್ತಿದ್ದು ಪ್ರಯಾಣಿಕರು ಹೈರಣಾಗಿದ್ದಾರೆ. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಸಾರಿಗೆ ಇಲಾಖೆ ಡಿಸಿ ದೇವರಾಜುರನ್ನ ಕೇಳಿದ್ರೆ, ಘಟಕಗಳಿಗೆ ಭೇಟಿ ನೀಡಿ ವಾಹನ ಪರಿಸ್ಥಿತಿ ಪರಿಶೀಲಿಸುವ ಸಬೂಬು ನೀಡುತ್ತಿದ್ದಾರೆ.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *