ಮದುವೆ ಮನೆಗಳಲ್ಲಿ ಸಂಬಂಧಪಟ್ಟ ಒಂದಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ವರದಕ್ಷಿಣೆಯ ಕಾರಣದಿಂದ ಮದುವೆ ನಿಂತು ಹೋದ, ಊಟದ ವಿಚಾರಕ್ಕೆ ವಧು-ವರರ ಕುಟುಂಬಸ್ಥರ ನಡುವೆ ಮನಸ್ತಾಪ ಏರ್ಪಟ್ಟ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ.ಉತ್ತರ ಪ್ರದೇಶದ ಕುಶಿನಗರ ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರೇಮ ವಿವಾಹವಾಗಬೇಕಿದ್ದ ವಧುವೇ ಮದುವೆಯ ಹಿಂದಿನ ದಿನ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.ಮುಖೇಶ್ ಮತ್ತು ಪುಷ್ಪಾ ಇಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಮತ್ತು ಬಹಳ ಕಷ್ಟಪಟ್ಟು ಈ ಮದುವೆಗೆ ಮನೆಯವರನ್ನು ಒಪ್ಪಿಸಿದ್ದರು. ಹೀಗೆ ಮನೆಯವರನ್ನು ಒಪ್ಪಿಸಿ 8 ತಿಂಗಳ ಹಿಂದೆಯೇ ಮದುವೆ ನಿಶ್ಚಯಿಸಿದ್ದರು. ಆದರೆ ವರದಕ್ಷಿಣೆ ವಿಚಾರದಲ್ಲಿ ಎರಡೂ ಕುಟುಂಬದ ನಡುವೆ ಒಂದಷ್ಟು ಮನಸ್ತಾಪ ಏರ್ಪಟ್ಟಿತ್ತು. ಮದುವೆ ಸಂಭ್ರಮದಲ್ಲಿದ್ದ ಸಂದರ್ಭದಲ್ಲಿಯೇ ವಧು ನಾಪತ್ತೆಯಾಗಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

