ಕೋಲಾರ: ಕೋಲಾರ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರೇ ಅಭ್ಯರ್ಥಿಯಾದರೂ ಸಹ ನಾನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಸಿದ್ದರಾಮಯ್ಯ ಅಥವಾ ಬೇರೆ ಯಾರೇ ಅಭ್ಯರ್ಥಿಯಾದರೂ ಕನಿಷ್ಟ ಆದರೂ ಸಹ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಚುನಾವಣೆಯಲ್ಲಿ ಎಲ್ಲಿ ನಿಲ್ಲಬೇಕು ಎನ್ನುವುದು ಅವರ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಬೇಕು. ನಾನು ಬನ್ನಿ ಅಂತಾನೂ ಹೇಳಲ್ಲ, ಬರಬೇಡಿ ಅಂತಾನೂ ಹೇಳಲ್ಲ ಎಂದು ಹೇಳಿದರು. ಇನ್ನು ನಮ್ಮದು ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷ ನಮ್ಮದು. ಸಂಘಟನೆ, ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ನೋಡಿ ಈ ಕ್ಷೇತ್ರದಲ್ಲಿ ಯಾರನ್ನು ನಿಲ್ಲಿಸಬೇಕು ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಪಕ್ಷ ಯಾರಿಗೆ ಟಿಕಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಟ್ಟರೆ ನಾನು ಸ್ಫರ್ಧಿಸುತ್ತೇನೆ ಎಂದು ಹೇಳಿದರು.
ಇದು ರಾಜಕರಣ ಇಲ್ಲಿ ಜಾತಿ ಬರುವುದಿಲ್ಲ. ಇಲ್ಲಿ ಎಲ್ಲಾ ಸಮುದಾಯದವರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದರು. ಕುರುಬ ಸಮಾಜ ಇರಬಹುದು, ಒಕ್ಕಲಿಗ ಸಮುದಾಯ ಇರಬಹುದು, ಪರಿಶಿಷ್ಟ ಜಾತಿ ಅವರು ಕಾರ್ಯಕ್ರಮಕ್ಕೆ ಬರಬಹುದು ಎಂದು ಸಿದ್ದರಾಮಯ್ಯ ಬಂದಿದ್ದರು. ಆದರೆ ಯಾರೂ ಕೂಡ ಕಾರ್ಯಕ್ರಮಕ್ಕೆ ಹೋಗಲಿಲ್ಲ. ನನ್ನ ಮೇಲೆ ವಿಶ್ವಾಸ ಇರುವುದಕ್ಕೆ ಅವರು ಯಾರು ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅಲ್ಲಾ ಯಾರೇ ಈ ಕ್ಷೇತ್ರದಲ್ಲಿ ಸ್ಫರ್ಧಿಸಿದರೂ ಕೂಡ ನಾನು ಸ್ಫರ್ಧೆ ಮಾಡೇ ಮಾಡುತ್ತೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

