ತುಮಕೂರು: ಮಾಜಿ ಶಾಸಕ ಸುರೇಶ ಗೌಡ ಕೊಲೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ.
ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್, ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಡಿಕಾ ಬಾಬು, ಗೌರಿಶಂಕರ್ ಬೆಂಬಲಿಗ ಹಿರೇಹಳ್ಳಿ ಮಹೇಶ್ ಅವರ ವಿರುದ್ಧ ದೂರು ದಾಖಲಾಗಿದೆ. ಸುರೇಶ್ ಗೌಡ ಮತ್ತು ಗೌರಿಶಂಕರ್ ಅವರ ನಡುವೆ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಇದು ಮತ್ತೊಂದು ಹಂತ ತಲುಪಿ ದೂರು ದಾಖಲಿಸಲಾಗಿದೆ.
ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಸುರೇಶ್ ಗೌಡ ದೂರು ನೀಡಿದ್ದು, ನನ್ನ ಕೊಲೆಗೆ ರೌಡಿಯೊಬ್ಬನಿಗೆ 5 ಕೋಟಿ ರೂ. ಸುಫಾರಿ ನೀಡಲಾಗಿದೆ. ಕಾರಿನಲ್ಲಿ ಸಂಚರಿಸುವಾಗ ಅಡ್ಡಗಟ್ಟಿ ಕೊಲೆಗೆ ಸಂಚು ಅಥವಾ ಭಾರಿ ವಾಹನ ಮೂಲಕ ಕೊಲೆ ಮಾಡಿಸಲು ಸಂಚು ನಡೆಸಲಾಗಿದೆ. ಕೊಲೆ ಮಾಡಿ ಅಪಘಾತದ ರೀತಿಯಲ್ಲಿ ಬಿಂಬಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಉಲ್ಲೇಖಿಸಿ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

