ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರದಲ್ಲಿ ಇರುತ್ತೆ ಅವಾಗೆಲ್ಲಾ ಹಿಂದೂ-ಮುಸ್ಲಿಂ ಗಲಭೆಯಾಗುತ್ತವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸಿಟಿ ರವಿ ಗೇಳಿಕೆಗೆ ದನಿಗೂಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಹೇಳಿದ್ರಲ್ಲಿ ತಪ್ಪೇನಿದೆ, ಸಿದ್ದರಾಮಯ್ಯ ಬೆಳಗ್ಗೆಯಿಂದ ಸಂಜೆವರೆಗೆ ಟಿಪ್ಪು ಸುಲ್ತಾನ್ ಪೂಜೆ ಮಾಡ್ತಾರೆ. ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಗೆ ಸಪೋರ್ಟ್ ಮಾಡೋದು, ಆರ್.ಎಸ್ ಎಸ್ ಅನ್ನು ಬೈಯೋದೆ ಸಿದ್ದರಾಮಯ್ಯ ಅವರ ನೇಚರ್ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂಗಳ ಹತ್ಯೆಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಮುಸ್ಲಿಂ ಗಲಭೆ ನಿಂತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆ ಇರತ್ತೆ, ಹಾಗಾಗಿ ಸಿಟಿ ರವಿ ಹೇಳಿದ್ದಾರೆ ಎಂದರು.
ಒಕ್ಕಲಿಗರ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಸೆ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರದ ಲಾಲಸೆಗೆ ಡಿಕೆ ಶಿವಕುಮಾರ್ ವೇದಿಕೆ ದುರುಪಯೋಗ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಯಾವದೇ ವೇದಿಕೆಯನ್ನಾದ್ರೂ ದುರಪಯೋಗ ಮಾಡಿಕೊಳ್ತಾರೆ.ಪಂಜಾಬ್ ದಲ್ಲಿ ಸಿದ್ದು ಗಲಾಟೆ ಇಂದ ಕಾಂಗ್ರೆಸ್ ನಿರ್ಣಾಮ ಆಯ್ತು. ಹಾಗೇಯೆ ಕರ್ನಾಟಕದಲ್ಲಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ಣಾಮ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜಗಳದಿಂದ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

