Breaking News

ಪ್ರಲ್ಹಾದ್ ಜೋಶಿ ಹುಟ್ಟು ಹಬ್ಬದ ನಿಮಿತ್ತ ದೇಹ ದಂಡ ನಮಸ್ಕಾರ

ಹುಬ್ಬಳ್ಳಿ: ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದ ಬಿಜೆಪಿ ಕಾರ್ಯಕರ್ತ ಕಲ್ಮೇಶ ಬೆಳವಟಗಿಯವರು ಸೋಮವಾರ ಬೆಳಗ್ಗೆ ಕೇಂದ್ರ ಸಂಸದ ಪ್ರಲ್ಹಾದ ಜೋಶಿ ಅವರ ಹುಟ್ಟು ಹಬ್ಬದ ನಿಮಿತ್ತ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ್ ನಿಗೆ ದೇಹ ದಂಡ ನಮಸ್ಕಾರ ಹಾಕಿದರು.

ಗ್ರಾಮದ ಪ್ರಮುಖ ಬೀದಿಯಲ್ಲಿರುವ ಬೋರಗಲ್ಲಿಗೆ ಪೂಜೆ ನೆರವೇರಿಸಿ, ಅಲ್ಲಿಂದ ಶ್ರೀ ಕಲ್ಲೇಶ್ವರನ ದೇವಸ್ಥಾನದವರೆಗೂ ದೇಹ ದಂಡ ನಮಸ್ಕಾರ ಹಾಕಿ ಮಾತನಾಡಿದ ಅವರು, ‘ನಮ್ಮ ನೆಚ್ಚಿನ ಪ್ರಲ್ಹಾದ ಜೋಶಿಯವರು ನಮ್ಮ ಭಾಗದ ಹೆಮ್ಮೆ. ಈ ಸಾರಿ ಅತಿವೃಷ್ಟಿಯಿಂದ ರೈತರ ಬೆಳೆಗಳು ಅಪಾರ ಹಾನಿಗೊಳಗಾಗಿದ್ದರಿಂದ
ಜೋಶಿಯವರು ರೈತರಿಗೆ ಬೆಳೆ ವಿಮಾ ಬಿಡುಗಡೆಗೊಳಿಸಿ ರೈತರಿಗೆ ಬಹಳ ಅನಕೂಲ ಮಾಡಿದ್ದಾರೆ. ನಮ್ಮ ಗ್ರಾಮದ ಹೊಲದ ರಸ್ತೆ ನಿರ್ಮಿಸಲು 50 ಲಕ್ಷ ರೂ ವಿಶೇಷ ಅನುದಾನ ಬಿಡುಗಡೆಗೊಳಿಸಿ ರಸ್ತೆಗೆ ಕಾಯಕಲ್ಪ ನೀಡಿದ್ದಾರೆ. ನಮ್ಮ ಗ್ರಾಮ ದೇವರಾದ ಶ್ರೀ ಕಲ್ಮೇಶ್ವರನ ವಾರವಾದ ಸೋಮವಾರದಂದು ದೇಹ ದಂಡ ನಮಸ್ಕಾರ ಹಾಕಿ ನಮ್ಮ ಜೋಶಿ ಸಾಹೇಬರಿಗೆ ಹುಟ್ಟು ಹಬ್ಬದ ಶುಭ ಕೋರಲು ಬೇಡಿಕೊಂಡಿದ್ದೆ ಅದರಂತೆ ನೆರವೇರಿಸಿದ್ದೇನೆ.

ನಮ್ಮ ಪ್ರೀತಿಯ ಸಂಸದರು ಸತತವಾಗಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಕೇಂದ್ರದಲ್ಲಿ ಇನ್ನೂ ಉನ್ನತ ಸಚಿವರಾಗಲಿ ಎನ್ನುವುದೇ ದೇವರಲ್ಲಿ ನನ್ನ ಬೇಡಿಕೆ. ಹಾಗೇಯೇ ಆ ಕಲ್ಮೇಶ್ವರ ಅವರಿಗೆ ಉತ್ತಮ ಆರೋಗ್ಯ, ಆಯಸ್ಸು, ಸುಖ ಶಾಂತಿ ಮತ್ತು ನೆಮ್ಮದಿ ನೀಡಿ ಕಾಪಾಡಲಿ ಎಂದು ಬೇಡಿಕೊಳ್ಳುತ್ತೇನೆ.
ಗ್ರಾಮದ ಜಗದೇವಯ್ಯ ಮಠದ, ಅಪ್ಪಣ್ಣ ನದಾಫ್, ಗುರುಪಾದ ಸ್ವಾದಿ, ನಿಂಗಪ್ಪ ನಡುವಿನಮನಿ, ಶೇಖಪ್ಪ ಮರಿಗೌಡರ, ಮಂಜುನಾಥ ಮಾಯಣ್ಣವರ, ಕಲ್ಮೇಶ ಬಿಳೇಬಾಳ, ಮಂಜುನಾಥ ಮಡಿವಾಳರ, ಮುತ್ತಣ್ಣ ಗೋಣಿ, ಕಲ್ಲಪ್ಪ ಮಡಿವಾಳರ, ಶಂಕರಲಿಂಗ ಸಂಗಟಿ, ಬಸವರಾಜ ಬಾರಕೇರ, ಮಲ್ಲಿಕಾರ್ಜುನ ಮರಿಗೌಡರ ಮುಂತಾದವರು ಇದ್ದರು.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *