ಬೆಂಗಳೂರು : ನಗರದ ರೌಡಿಶೀಟರ್ ಗಳಿಗೆ ಸಿಸಿಬಿ ಬಿಗ್ ಶಾಕ್ ನೀಡಿದ್ದು, ರೌಡಿಶೀಟರ್ ಗಳು ಊರು ಬಿಡುವಂತೆ ಸಿಸಿಬಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕೆಲ ರೌಡಿ ಶೀಟರ್ ಗಳು ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಜಕೀಯ ಪಕ್ಷಕ್ಕೆ ಸೇರ್ಪಡೆಗೆ ಸಿದ್ದತೆ ನಡೆಸಿದ್ದರು. ಈ ಪೈಕಿಸೈಲೆಂಟ್ ಸುನೀಲ ರಾಜಕೀಯ ಕಾರ್ಯಕ್ರಮದಲ್ಲಿ ಕಂಡಿದ್ದು ಸಿಸಿಬಿಗೆ ದೊಡ್ಡ ಮುಜುಗರ ಊಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ರೌಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಸಿಬಿ ಮುಂದಾಗಿದೆ ಎನ್ನಲಾಗಿದೆ.
ರೌಡಿ ಶೀಟರ್ ಗಳು ಬೆಂಗಳೂರಿನಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಖಡಕ್ ವಾರ್ನಿಂಗ್ ನೀಡಿದೆ. ರಾಜಕೀಯ ಪಕ್ಷ ಸೇರ್ಪಡೆಗಾಗಿ ಸಿದ್ಧತೆ ನಡೆಸಿದ್ದ ರೌಡಿ ಶೀಟರ್ ಗಳಿಗೆ ಸಿಸಿಬಿ ಬಿಗ್ ಶಾಕ್ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

