ಬೆಂಗಳೂರು: ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೆ ಜುಲೈ 9ರಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದ್ದಾರೆ.
ಕೆ ಎಸ್ ಬಿ ಸಿ ಎಲ್ ಅಕೌಂಟ್ ಗೆ ಹಣ ಹಾಕಿದರೆ ಮೊದಲು ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಗಿದೆ. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದಾಗಿನಿಂದ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕು. ಸಗಟು ಮದ್ಯ ಖರೀದಿದಾರರಿಗೇ ಸಂಕಷ್ಟ ಎದುರಾಗಿದೆ.ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಸಕಾಲದಲ್ಲಿ ಮದ್ಯ ಪೂರೈಕೆಯಾಗದೇ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಹೀಗೇಕೆ ಗೋಳು ಹೊಯ್ದುಕೊಳ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಕೆ ಎಸ್ ಬಿ ಸಿ ಎಲ್ ಅಕೌಂಟ್ ಗೆ ಹಣ ಹಾಕಿದರೆ ಮೊದಲು ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಗಿದೆ. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದಾಗಿನಿಂದ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕು. ಸಗಟು ಮದ್ಯ ಖರೀದಿದಾರರಿಗೇ ಸಂಕಷ್ಟ ಎದುರಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





