ಕಲಘಟಗಿ : ತಾಲೂಕಿನ ಕೆಲವು ಗ್ರಾಮಗಳಲ್ಲಿ ಸುಮಾರು 2 ತಿಂಗಳಿನಿಂದ ಕಾಡಾನೆಗಳ ಹಾವಳಿಯಿಂದ ರೈತರು ಪರದಾಡುತ್ತಿದ್ದಾರೆ ಬಹುತೇಕ ಗ್ರಾಮಗಳ ಹೊಲಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಕಬ್ಬು, ಮೆಕ್ಕೆಜೋಳ, ಭತ್ತ, ಸೋಯಾಬಿನ್ ಸೇರಿದಂತೆ ಇನ್ನಿತರ ಬೆಳೆಗಳನ್ನ ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಇದರಿಂದ ರೈತರು ಜೀವ ಭಯದಲ್ಲಿ ಜಮೀನುಗಳಿಗೆ ತೆರಳಿ ಕೆಲಸ ಮಾಡುವಂತಾಗಿದೆ. ಬೆಂಬಿಡದೆ ಕಾಡುತ್ತಿರುವ ಆನೆಗಳ ಹಾವಳಿಯಿಂದ ತಾಲೂಕಿನ ರೈತರು ಬೇಸತ್ತು ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆನೆಗಳ ಹಿಂಡನ್ನು ಕಾಡಿಗೆ ಓಡಿಸಿ ನಮಗೆ ಅನುಕೂಲ ಮಾಡಿಕೊಂಡುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

