ಕಲಬುರಗಿ: ಗೃಹಿಣಿಯೊಬ್ಬಳು ಕುರಿಕೋಟಾ ಸೇತುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕಮಲಾಪುರ ತಾಲೂಕಿನಲ್ಲಿ ನಡೆದಿದೆ. ಸೃಷ್ಟಿ ಮಾರುತಿ (21) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಮೃತ ಸೃಷ್ಟಿ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ನಿವಾಸಿ. ಡಿಗ್ರಿ ಫೈನಲ್ ಇಯರ್ನಲ್ಲಿ ಓದುತ್ತಿದ್ದಳು.
ಡಿಸೆಂಬರ್ 13ರಂದು ಕಾಲೇಜಿಗೆ ಹೋಗಿದ್ದ ಮೃತ ಸೃಷ್ಟಿ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಮಹಾಗಾಂವ್ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು.ಇನ್ನು ಕಾಣೆಯಾಗಿದ್ದ ಸೃಷ್ಟಿಯ ಮೃತ ದೇಹವು ಇಂದು ಕುರಿಕೋಟಾ ಸೇತುವೆಯ ದಡದಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಘಟನಾ ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿದ್ದಾರೆ. ಈ ಘಟನೆ ಸಂಬಂಧ ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

