ಮೈಸೂರು: ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆ ಮಚ್ಚು ಹಿಡಿದು ಬಂದಿರುವಂತಹ ಘಟನೆ ಜಿಲ್ಲೆಯ ಸಾತಗಳ್ಳಿ ಬಸ್ ಡಿಪೋನಲ್ಲಿ ಡಿ. 12ರಂದು ನಡೆದಿತ್ತು.
ಸದ್ಯ ಈ ಕೇಸ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಫೀಕ್ ಅಹ್ಮದ್ ಹಾಗೂ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾಗಿ ನಗರದಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗೆ ಮಚ್ಚು ತೋರಿಸಿದ್ದ ದಂಪತಿಯನ್ನು ಬಂಧಿಸಲಾಗಿದೆ.
ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಡಿ.12ರಂದು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಈ ವೇಳೆ ಮಚ್ಚು ತೋರಿಸಿ ಅಧಿಕಾರಿಗಳನ್ನು ದಂಪತಿ ಹೆದರಿಸಿದ್ದರು. 2017ರಲ್ಲಿ ಕಟ್ಟಡವನ್ನು 12 ವರ್ಷಗಳ ಅವಧಿಗೆ ಶಫೀಕ್ ಬಾಡಿಗೆ ಪಡೆದಿದ್ದ. ಎರಡು ವರ್ಷಗಳ ಕಾಲ ಶಫೀಕ್ ಅಹ್ಮದ್ ಕಟ್ಟಡದ ಬಾಡಿಗೆ ಕಟ್ಟಿಲ್ಲ.
ಕೊವಿಡ್ ಕಾರಣ ನೀಡಿ ನ್ಯಾಯಾಲಯದ ಮೂಲಕ ಸ್ಟೇ ತಂದಿದ್ದ. ಸ್ಟೇ ಅವಧಿ ಮುಗಿದ ನಂತರ ಕಟ್ಟಡ ಖಾಲಿ ಮಾಡಿಸಲು ಅಧಿಕಾರಿಗಳು ಹೋಗಿದ್ದರು. ಆದರೆ ಪೊಲೀಸರಿಗೆ ಮಾಹಿತಿ ನೀಡದೆ ಸಾರಿಗೆ ಅಧಿಕಾರಿಗಳು ಹೋಗಿದ್ದರು. ಡಿ.12ರಂದು ಘಟನೆ ಬಳಿಕ ಆರೋಪಿ ದಂಪತಿ ಪರಾರಿಯಾಗಿದ್ದರು. ನಿನ್ನೆ ಸಂಜೆ ವಿರಾಜಪೇಟೆ ಸಮೀಪ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಆರೋಪಿ ದಂಪತಿ ವಿರುದ್ಧ ರೌಡಿಶೀಟರ್ ಸಹ ತೆರೆಯಲಾಗಿದೆ ಎಂದು ರಮೇಶ್ ಬಾನೋತ್ ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

