ಹುಬ್ಬಳ್ಳಿ: ಪ್ರಯೋಗಂ ಫೌಂಡೇಶನ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಧಾರವಾಡದ ವತಿಯಿಂದ ಪ್ರಯೋಗಂ ಅಭಿಯಾನವನ್ನು ಇದೇ 26ರಿಂದ 28ರ ವರೆಗೆ ಧಾರವಾಡದ ಚನ್ನಬಸವೇಶ್ವರನಗರದ ಲಿಂಗಾಯತ ಭವನದಲ್ಲಿ ಹಾಗೂ ನಗರದ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಯೋಗಂ ಸಂಸ್ಥೆಯ ಮುಖಂಡರಾದ ಸೂರ್ಯಕಾಂತ ಡಿ.ಪಿ.,ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ತಿ ಇಂಡಿಯಾ, ವೆಲ್ತಿ ಇಂಡಿಯಾದ ಘೋಷ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ಸದುದ್ದೇಶದಿಂದ ಪ್ರಯೋಗಂ ಯೋಗ, ಪ್ರಾಣಾಯಾಮ, ಧ್ಯಾನದ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಪ್ರಕೃತಿ ನಮಗೆಲ್ಲಾ ಸಮಾನ ಪ್ರಮಾಣದ ಸಮಯ ನೀಡಿದೆ.ಅದರಲ್ಲಿ ಯಾವ ವಿಷಯ ನಮ್ಮ ಆಧ್ಯತೆಯಾಗಿದೆ.ಪ್ರತಿಯೊಬ್ಬರಿಗೂ ಸಾಕಷ್ಟು ಶಕ್ತಿಯಿದೆ.ಅದು ಜಡವಾಗಿದೆ.ಆದರೆ ಅದರಲ್ಲಿ ಎಷ್ಟು ಶೇಕಡಾವಾರು ಶಕ್ತಿಯನ್ನು ನಮ್ಮ ಏಳಿಗೆಗೆ ಬಳಸಬಹುದು ಎಂಬುವಂತ ಸಂಪೂರ್ಣ ಮಾಹಿತಿಯನ್ನು ಪ್ರಯೋಗಂ ಶಿಬಿರದಲ್ಲಿ ನೀಡಲಾಗುತ್ತದೆ ಎಂದು ಅವರು ಹೇಳಿದರು. 26ರಿಂದ 28ರ ವರೆಗೆ ನಡೆಯಲಿರುವ ಶಿಬಿರ ಬೆಳಗ್ಗೆ 5-42ರಿಂದ 8-30ರ ವರೆಗೆ ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ ಹಾಗೂ ಸಂಜೆ 6-20 ರಿಂದ 8-40 ರ ವರೆಗೆ ಧಾರವಾಡದ ಲಿಂಗಾಯತ ಭವನದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಗಿದ್ದು, ಔಷಧಿ ರಹಿತ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಲು ಪ್ರಯೋಗಂ ಅಭಿಯಾನದಲ್ಲಿ ಭಾಗವಹಿಸಿ ಎಂದು ಅವರು ಸಲಹೆ ನೀಡಿದರು. ಪ್ರವೇಶವು ಉಚಿತವಾಗಿದ್ದು, ಆಸಕ್ತರು ಉಚಿತ ಪಾಸಗಳಿಗಾಗಿ 8147830741, 8147830751 ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಸಡಿಲವಾದ ಬಟ್ಟೆ, ಕರವಸ್ತ್ರ, ಜಮಕಾನ, ಒಂದು ಬಾಟಲ ನೀರು ಸೇರಿದಂತೆ ಯೋಗಕ್ಕೆ ಅವಶ್ಯಕವಿರುವ ಸಾಮಗ್ರಿಗಳನ್ನು ತೆಗೆದುಕೊಂಡು ಬರಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಗಿರಿಜಾ, ಗೀತಾ ಹೆಬಸೂರು, ನವೀನ ಹೆಬಸೂರ, ಮೆಹಬೂಬ ಅಲಿ ನಧಾಪ, ಎಂ.ವಿ.ಸೋಮಣ್ಣ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





