ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಟ ಯಶ್ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಭೇಟಿಯಾಗಿದ್ದು, ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
`ಕೆಜಿಎಫ್ 2′ ಸಿನಿಮಾ ಬಂದು 7 ತಿಂಗಳು ಕಳೆದರು ಕೂಡ ಯಶ್ ಸೈಲೆಂಟ್ ಆಗಿರೋದು, ಮುಂದಿನ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಇರೋದು ನೆಟ್ಟಿಗರಿಗೆ ಕುತೂಹಲ ಮೂಡಿಸಿದೆ. ಅವರ ಮುಂದಿನ ನಡೆಯ ಬಗ್ಗೆ ಫ್ಯಾನ್ಸ್ ಮತ್ತಷ್ಟು ಕ್ಯೂರಿಯಸ್ ಆಗಿದ್ದಾರೆ. ಈಗ ಆಂಧ್ರ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಯಶ್ ಭೇಟಿಯಾಗಿರೋದು ರಾಜಕೀಯ ರಂಗ ಮತ್ತು ಸಿನಿಮಾರಂಗದಲ್ಲಿ ಹಾಟ್ ನ್ಯೂಸ್ ಆಗಿದೆ.
ಹೈದರಾಬಾದ್‌ಗೆ ಯಶ್ ಭೇಟಿ ನೀಡಿದ್ದು, ಹೋಟೆಲ್‌ವೊಂದರಲ್ಲಿ ಕೆಲ ಸಮಯ ಇಬ್ಬರು ಮಾತುಕತೆ ನಡೆಸಿದ್ದಾರೆ. ನಾರಾ ಲೋಕೇಶ್ ಜೊತೆಗಿನ ಯಶ್ ಭೇಟಿಗೆ ಕಾರಣ ಏನು? ಯಾವ ವಿಚಾರಗಳನ್ನ ಮಾತನಾಡಿದ್ದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

