Breaking News

ಅಗ್ನೀಪಥ ಯೋಜನೆಯಲ್ಲಿ 4 ಯುವಕರು, ಒಬ್ಬರು CISFಗೆ ಆಯ್ಕೆ : ವಿಶೇಷ ಗೌರವ ಸಲ್ಲಿಕೆ

ಧಾರವಾಡ: ಯಾದವಾಡ ಗ್ರಾಮ ಪಂಚಾಯತಿಯಿಂದ ಸೈನ್ಯಕ್ಕೆ ಆಯ್ಕೆಯಾದ ಊರಿನ ಹೆಮ್ಮೆಯ ಯುವಕರಿಗೆ ಪಂಚಾಯತ್ ಕಾಯಾ೯ಲಯದ ಆವರಣದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಮೆಹಬೂಬಸುಬಾನಿ ಮುಜಾವರ , ಕಾಸೀಮ ಕುತುಬುದ್ದೀನ ಭಾವಿಮನಿ‌, ರಾಘವೇಂದ್ರ ಯಲಿಗಾರ , ಮೃತ್ಯುಂಜಯ ಕುಸುಗಲ್ ಆರ್ಮಿಗೆ ಆಯ್ಕೆಯಾಗಿದ್ದಾರೆ. ಸಚಿನ ಕುಸುಗಲ್ ಎಂಜಿನೀಯರಿಂಗ್ ( CISF) ಈಗಾಗಲೇ ಹುದ್ದೆಗೆ ಸೇರ್ಪಡೆಯಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರು ಸನ್ಮಾನ ಸ್ವೀಕರಿಸಿದರು.

ಅಂಗನವಾಡಿ ಕಾರ್ಯರ್ತೆಯಾಗಿ ಸೇವಾ ನಿವೃತ್ತಿ ಹೊಂದಿದ ಯಾದವಾಡ ಗ್ರಾಮದವರೇ ಆದ ಅನುಸುಯಾ ನೇಕಾರ ಇವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು‌ಅಧ್ಯಕ್ಣರಾದ ಪಾರ್ವತಿ ಹಿರೇಮಠ, ಲಕ್ಷ್ಮಿ ಗಳಗಿ, ಸದಸ್ಯರಾದ ಮಡಿವಾಳಪ್ಪ ದಿಂಡಲಕೊಪ್ಪ, ಶಿವಾನಂದ ಬೆಂಡಿಗೇರಿ, ಮಂಜುನಾಥ ಬಂಡೆಪ್ಪನವರ, ಮಮತಾಜಬೀ ಹಾವಗಾರ, ಶಿವಪ್ಪ ಕುಂಬಾರ್, ಪಿಡಿಓ ರಾಜೇಶ್ವರಿ ಚಲವಾದಿ ಸೇರಿದಂತೆ ಊರಿನ ಪ್ರಮುಖರಾದ ಚಂದ್ರು ಬೆಂಡಿಗೇರಿ, ಮಾಬುಸುಬಾನಿ ಬೇಟಗೇರಿ, ಮಂಜು ಹಡಪದ, ಶೇಖಣ್ಣಾ ಕುಂಬಾರ, ರಾಚಯ್ಯಾ ಹಳ್ಳಿಗೇರಿಮಠ, ನಾಗೇಶ ಯಲಿಗಾರ, ಬಸವರಾಜ ಮಾಕಣ್ಣವರ್ ಸೇರಿದಂತೆ ಊರಿನ ಇತರರು ಪಾಲ್ಗೊಂಡಿದ್ದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *