Breaking News

ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್‌ ನಿಧನ


ಟಾಲಿವುಡ್‌ನಲ್ಲಿ ಒಂದರ ಹಿಂದೊಂದರಂತೆ ದುರಂತ ನಡೆಯುತ್ತಿದೆ. ಇತ್ತೀಚೆಗೆ ಸೂಪರ್‌ ಸ್ಟಾರ್‌ ಕೃಷ್ಣ ನಿಧನರಾಗಿದ್ದರು. ಆ ನೋವಿನಿಂದ ಹೊರಬರುತ್ತಿದ್ದಂತೆ ಮೊನ್ನೆಯಷ್ಟೇ ಕೈಕಲಾ ಸತ್ಯನಾರಾಯಣ್‌ ಅವರ ಸಾವು ತೆಲುಗು ಮಂದಿಗೆ ಆಘಾತ ನೀಡಿತ್ತು.

ನಿನ್ನೆಯಷ್ಟೇ ಸತ್ಯನಾರಾಯಣ್‌ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ಇಂದು ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್‌ ನಿಧನರಾಗಿದ್ದಾರೆ.

ತೆಲುಗಿನ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಚಲಪತಿ ರಾವ್‌ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಪೋಷಕ ನಟನಾಗಿ, ವಿಲನ್‌ ಆಗಿ, ಹಾಸ್ಯಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಚಲಪತಿ ರಾವ್‌ ಇಂದು (ಭಾನುವಾರ) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಚಲಪತಿ ರಾವ್‌ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಬ್ಬರು ಪುತ್ರಿಯರು, ಪುತ್ರ ಹಾಗೂ ಪತಿಯನ್ನು ಚಲಪತಿ ರಾವ್‌ ಅಗಲಿದ್ದಾರೆ. ಪುತ್ರ ರವಿಬಾಬು, ತೆಲುಗು ಚಿತ್ರರಂದಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಚಲಪತಿ ರಾವ್‌ 8 ಮೇ 1944 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪರರು ಎಂಬ ಗ್ರಾಮದಲ್ಲಿ ಜನಿಸಿದರು. ಎನ್‌ಟಿಆರ್‌ ಅವರ ಸ್ಪೂರ್ತಿಯಿಂದ ಚಿತ್ರರಂಗಕ್ಕೆ ಬಂದ ಅವರು ಉತ್ತಮ ನಟನಾಗಿ ಹೆಸರು ಮಾಡಿದ್ದರು.

ಚಲಪತಿ ರಾವ್‌, ಎನ್‌ಟಿಆರ್‌ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದ ಚಲಪತಿ ರಾವ್‌, ಈ ಮಧ್ಯೆ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಅವರು ತೆಲುಗು ಚಿತ್ರರಂಗದಿಂದ ಶಾಶ್ವತವಾಗಿ ಅಗಲಿದ್ದಾರೆ. ಚಲಪತಿ ರಾವ್‌ ನಿಧನರಾದ ಸುದ್ದಿ ತೆಲುಗು ಚಿತ್ರರಂಗಕ್ಕೆ ಆಘಾತ ನೀಡಿದ. ಸಿನಿಮಾಭಿಮಾನಿಗಳು ಕೂಡಾ ಹಿರಿಯ ನಟನ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *