ಪೀಣ್ಯ ದಾಸರಹಳ್ಳಿ: ರಿಯಲ್ ಎಸ್ಟೇಟ್‌ವೊಂದರ ಆಫೀಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬೇಕೆಂಬ ಹಂಬಲಕ್ಕೆ ಬಿದ್ದು ಆನ್‌ಲೈನ್ ಆಟದ ಗೀಳಿನಿಂದಾಗಿ ಸಾಲ ಮಾಡಿಕೊಂಡು ಈಗ ತನ್ನ ಜೀವನವನ್ನೇ ಕಳೆದುಕೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಾಜು (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ಮಾಗಡಿ ರಸ್ತೆಯ ಸೀಗೆಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಬಡ ಕುಟುಂಬದಲ್ಲಿ ಹುಟ್ಟಿತಂದೆ ಇಲ್ಲದಿದ್ದರೂ ತಾಯಿಯ ಮಮತೆ ಮತ್ತು ಆರೈಕೆಯಲ್ಲಿ ಬೆಳೆದ ನಾಗರಾಜು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನ್‌ಲೈನ್ ಗೇಮ. ಗೀಳಿಗೆ ಬಿದ್ದು ಬೆಟ್ಟಿಂಗ್, ಆನ್‌ಲೈನ್ ಹೀಗೆ ಲಕ್ಷಾಂತರ ಹಣ ಹೂಡಿ ಜೇಬು ಖಾಲಿ ಮಾಡ್ಕೊಂಡು ಯುವಕ ಸಾಲದ ಶೂಲಕ್ಕೆ ಸಿಲುಕಿದ್ದ ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

