Breaking News

ವಸತಿ ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬಾಲಕ ಸಾವು

ನಂಜನಗೂಡು: ವಿದ್ಯುತ್‌ ಸ್ಪರ್ಶಿಸಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಮಹದೇವ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ನಡೆದಿದೆ. ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ನಿವಾಸಿ ಬಸವಣ್ಣ ಅವರ ಪುತ್ರ ಯುವೀನ್‌(7) ಮೃತ ಬಾಲಕ. ಈತ ನಂಜನಗೂಡಿನ ದಳವಾಯಿ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ವಸತಿ ಶಾಲೆಯ ವಸತಿಗೃಹದಲ್ಲೇ ವಾಸವಿದ್ದ ಬಸವಣ್ಣ ಅವರು ಪುತ್ರ ಯುವೀನ್‌ ಜತೆ ಬೆಳಗ್ಗೆ ಶಾಲೆ ಭೋಜನಾಲಯದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಹೋಗಿದ್ದರು. ನೀರು ಸಣ್ಣದಾಗಿ ಬರುತ್ತಿದ್ದರಿಂದ ಕ್ಯಾನ್‌ ಇಟ್ಟು ಮನೆಗೆ ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಕ್ಯಾನ್‌ ತುಂಬಿದೆಯೇ ಎಂದು ನೋಡಲು ಹೋದ ಯುವೀನ್‌ ನೀರಿನ ಪೈಪ್‌ ಹೊರಗಿಡುವಾಗ ವಿದ್ಯುತ್‌ ಸ್ಪರ್ಶವಾಗಿ ಮೃತಪಟ್ಟಿದ್ದಾನೆ

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *