Breaking News

ಕಳೆದ 24 ದಿನಗಳಲ್ಲಿ ಒಟ್ಟು ಏಳು ಪಾಸಿಟಿವ್ ಪ್ರಕರಣಗಳು ಪತ್ತೆ


ಬೆಂಗಳೂರು: ಚೀನಾದಲ್ಲಿ ಮತ್ತೆ ಭಯ ಹುಟ್ಟಿಸಿರುವ ರೂಪಾಂತರಿ ಕೊರೊನಾ ಬಗ್ಗೆ ರಾಜ್ಯದಲ್ಲೂ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರದ ಒಂದಷ್ಟು ತಯಾರಿಗಳ ಮಧ್ಯೆಯೂ ಕೊರೊನಾ ಬಿಎಫ್​​7 ಈಗಾಗಲೇ ಬಂದುಬಿಟ್ಟಿದ್ಯಾ ಎಂಬ ಭಯ ಶುರುವಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 24 ದಿನಗಳಲ್ಲಿ ಒಟ್ಟು ಏಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ ನವೆಂಬರ್​ರಲ್ಲಿ 8 ಪಾಸಿಟಿವ್ ಪ್ರಕರಣ ಪತ್ತೆ ಆಗಿವೆ. ಇದು ಕೊರೊನಾದ BF.7 ತಳಿಯೇ ಎಂಬ ಭಯ ಶುರುವಾಗಿದೆ. ಯಾಕಂದ್ರೆ ಚೀನಾದಲ್ಲಿ ಆತಂಕ ಮೂಡಿಸಿರುವ ಈ ವೈರಸ್​ ತುಂಬಾ ಡೇಂಜರ್​ ಆಗಿದೆ. ಹೀಗಾಗಿ ವಿದೇಶಿ ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರ ತೀವ್ರ ನಿಗಾ ಇಟ್ಟಿದೆ.

ಪಾಸಿಟಿವ್ ಪ್ರಕರಣಗಳ ಸ್ವ್ಯಾಬ್ ಮಾದರಿಯನ್ನ ಹೆಚ್ಚಿನ ತಪಾಸಣೆಗಾಗಿ ಲ್ಯಾಬ್​ಗೆ ಕಳುಹಿಸಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ಯಾವ ಮಾದರಿ ಕೊರೊನಾ ಅನ್ನೋದು ಗೊತ್ತಾಗಲಿದೆ. ಸದ್ಯ ಆರೋಗ್ಯ ಅಧಿಕಾರಿಗಳು ವೈಜ್ಞಾನಿಕ ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ.

Share News

About BigTv News

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *