ಧಾರವಾಡ : ತಾಲೂಕ ವೀರಾಪೂರ ಗ್ರಾಮದ 14ನೆ ಸರ್ವೆ ನಂಬರ ಜಮೀನು ತುರಮಂದಿ ಅಂತಾ ಪಹಣಿಯಲ್ಲಿ ನಮೂದಿದ್ದು. ನಮ್ಮ ಪೂರ್ವಿಕರು ಅದೇ ಜಮೀನಿನ ಒಂದು ಕಡೆ ಸರ್ವ ಸಮುದಾಯದವರ ಸ್ಮಶಾನ ಮಾಡಿಕೊಂಡಿದ್ದಾರೆ. ಉಳಿದ ಜಮೀನಿನಲ್ಲಿ ದನ ಕರುಗಳನ್ನು ಮೇಯಿಸಲು, ಬೆಳೆಗಳ ರಾಶಿ ಮಾಡಲು ಉಪಯೋಗಿಸುತ್ತಾ ಬಂದಿದ್ದಾರೆ. ಈಗಲೂ ಉಪಯೋಗಿಸುತ್ತಿದ್ದಾರೆ ಎಂದು ಶಾಲಾಭಿವೃದ್ದಿ ಮತ್ತು ಮೇಲುಸ್ತವಾರಿ ಸಮಿತಿಯ ಅಧ್ಯಕ್ಷರಾದ ಈರಣ್ಣ ಮುರಗೋಡ ಹೇಳಿದರು,
ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದರು ಅವರು ನಮ್ಮ ವೀರಾಪೂರ ಗ್ರಾಮವು ರಾಮಾಪೂರ, ಕಲ್ಲಾಪೂರ, ಹೊಸವಾಳ, ಸಿದ್ದಾಪೂರ, ಮದಿಕೊಪ್ಪ, ಸ್ಟೇಷನ್ ನಾಗಲಾವಿ, ವರವ ನಾಗಲಾವಿ, ಕಂಬಾರಗಣವಿ ಗ್ರಾಮಗಳ ಕೇಂದ್ರ ಸ್ಥಳವಾಗಿದ್ದು. ಬಹಳಷ್ಟು ವಿದ್ಯಾರ್ಥಿಗಳು 10 ನೇ ತರಗತಿ ಪಾಸಾದ ನಂತರ ಪದವಿ ಪೂರ್ವಶಿಕ್ಷಣ ಕಲಿಯಬೇಕೆಂಬ ಹಂಬಲವಿದ್ದರೂ ಮನೆಯಲ್ಲಿಯ ಪಾಲಕರು . ಈಗಲೂ ಕೂಡಾ ಸಾರಿಗೆ ವ್ಯವಸ್ಥೆ ಸರಿಯಾಗಿರದ ಕಾರಣ ವಿದ್ಯಾರ್ಥಿ ಅದರಲ್ಲೂ ವಿದ್ಯಾರ್ಥಿನೀಯರನ್ನು ಧಾರವಾಡ ನಗರಕ್ಕೆ ಕಳಿಸಲು ಅನುಮಾನಿಸುತ್ತಿದ್ದಾರೆ ಎಂದರು.
ಕೆಐಎಡಿಬಿಯವರು ನಮ್ಮ ಗಾಂವಠಾಣ ಜಮೀನನ್ನು ಸ್ವಾಧಿನಪಡಿಸಿಕೊಂಡ ಬಗ್ಗೆ ನೋಟೀಸ್ ಹೊರಡಿಸಿದ್ದಾರೆ, ಮಾನ್ಯ ತಹಶೀಲ್ದಾರರು 4 ಎಕರೆ 20 ಗುಂಟೆ ಜಮೀನಿನ ಪೈಕಿ 1 ಎಕರೆ ಜಮೀನನ್ನು ಸ್ಮಶಾನಕ್ಕೆ ಮೀಸಲಿಟ್ಟಿದ್ದಾರೆ. ಇನ್ನುಳಿದ 3-20 ಗುಂಟೆ ಜಮೀನನ್ನು ಸ್ವಾಧಿಪಡಿಸಿಕೊಂಡ ಬಗ್ಗೆ ನಮಗೆ ಆತಂಕ ಇದೆ. ಕಾರಣ ನಮ್ಮೂರಿಗೆ ಈ ಜಮೀನು ಹೊರತುಪಡಿಸಿ ಯಾವುದೇ ಜಮೀನಿನ ಲಭ್ಯತೆ ಇರುವುದಿಲ್ಲಾ ನಮ್ಮ ಗ್ರಾಮದಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪದವಿ ಪೂರ್ವ ಕಾಲೇಜ ಶಿಕ್ಷಣ ಇಲ್ಲದ ಕಾರಣ 2010 ರಿಂದ ನಮ್ಮ ಗ್ರಾಮಕ್ಕೊಂದು ಪದವಿ ಪೂರ್ವ ಕಾಲೇಜ್ ಮಂಜೂರ ಮಾಡಿಸಲು ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನಮ್ಮ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು, ಇದೆ ಸರ್ವೆ ನಂಬರ ಜಮೀನನ್ನು ಕಾಲೇಜಿಗೆ ಮೀಸಲಿಟ್ಟು ದಿನಾಂಕ 30/10/2010 ರಂದು ನಡೇದ ಸಾಮನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ.
ನಮ್ಮೂರ ಸರಕಾರಿ ಪ್ರೌಢ ಶಾಲೆಯನ್ನು ಪದವಿ ಪೂರ್ವಕಾಲೇಜನ್ನಾಗಿ ಉನ್ನತಿಕರಿಸಿಲು ಸರಕಾರದ ಮಟ್ಟದಲ್ಲಿ ಎಲ್ಲ ತಯಾರಿ ನಡೇಯುತ್ತಿದ್ದು, ಈ ಕುರಿತು ಸರಕಾರ 05/10/2020 ರಂದು ಸರಕಾರ ಸುತ್ತೋಲೆಯನ್ನು ರವಾನಿಸಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿನಿಂದ ಪದವಿ ಪೂರ್ವ ಕಾಲೇಜ ಪ್ರಾರಂಭಿಸುವ ಎಲ್ಲ ಲಕ್ಷಣಗಳಿದ್ದು, 1 ಎಕರೆ ಸ್ಮಶಾನ ಜಮೀನು ಹೊರತುಪಡಿಸಿ ಉಳಿದ 3-20 ಗುಂಟೆ ಜಮೀನನ್ನು ನಮ್ಮೂರ ಪದವಿ ಪೂರ್ವ ಕಾಲೇಜಿಗೆ ಮೀಸಲಿಡಲೇಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದರು.
ಸತತ ನಾವು ೧೨ ವರ್ಷದಿಂದ ಹೋರಾಟ ಮಾಡುತ್ತಾ ಬಂದರೂ ಫಲ ಸಿಗದಾಗಿದೆ, ಗ್ರಾಮೀಣ ಭಾಗದ ಮಕ್ಕಳ ಶ್ರೇಯೋಭಿವೃದ್ದಿಗೆ ಸಕಾರದ ಜೊತೆಗೆ ಮಾನ್ಯ ಶಾಸಕರ ಬದ್ಧತೆಯೂ ಬೇಕು. ಇವು ಎರಡೂ ಇಲ್ಲವಾದರೆ ಶೈಕ್ಷಣಿಕವಾಗಿ ನಾವು ಅಭಿವೃದ್ದಿ ಹೊಂದುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.2023 -24 ನೇ ಶೈಕ್ಷಣಿಕ ವರ್ಷದಿಂದ ಕಾಲೇಜ ಪ್ರಾರಂಭಿಸಲೇಬೇಕು ಎಂದು ಆಗ್ರಹಿಸಿದರು, ಒಂದು ವೇಳೆ ನಮ್ಮ ಗ್ರಾಮಕ್ಕೆ ಪ .ಪೂ . ಕಾಲೇಜ ಪ್ರಾರಂಬಿಸಲಿಲ್ಲಾ ಅಂದರೆ ಮಕ್ಕಳ ಸಮೇತ, ಕಾಲೇಜು ಪ್ರಾರಂಭಿಸುವರೆಗೂ ನಾವು ಪ್ರತಿಭಟನೆ ಮಾಡುತ್ತೇವೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು .
ಗ್ರಾಮದ ಹಿರಿಯರಾದ ಸಿದ್ದಪ್ಪ ವಾಘ , ಧರ್ಮರಾಜ ಮುರಗೋಡ, ಫಕ್ಕೀರಪ್ಪ ಹಂಚಿಮನಿ ಪತ್ರೀಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

