ಧಾರವಾಡ : ಕಲೆ ಸಾಹಿತ್ಯ ಮತ್ತು ನಮ್ಮ ಕನ್ನಡ ನಾಡಿನ ಸಂಸ್ಕ್ರತಿಯ ಪ್ರತೀಕ ಎಂದು ಧಾರವಾಡದ ಮಾಜಿ ಶಾಸಕಿ ಶ್ರೀಮತಿ ಸೀಮಾ ಅಶೋಕ ಮಸೂತಿ ಹೇಳಿದರು.
ಇಲ್ಲಿಯ ಕನ್ನಡ ಸಾಹಿತ್ಯ ಭವನದಲ್ಲಿ, ಕರ್ನಾಟಕ ಸೋಸಿಯಲ್ ಕ್ಲಬ್ ಹಾಗೂ ಚೇತನ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ಜರುಗಿದ ರಾಜ್ಯ ಮಟ್ಟದ ಕರೋಕೆ ಗೀತಗಾಯನ ಹಾಗೂ ವಣಿತಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತು ನಮ್ಮ ದೇಶದ ಮಹಾನ್ ವ್ಯಕ್ತಿ ಮಾಜಿ ಪ್ರದಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ಏಸು ಕ್ರಿಸ್ತನ ಜನ್ಮದಿನದಂದು ಈ ಎರಡು ಸಂಸ್ಥೆಗಳು ಅದ್ಭುತ ಕಾರ್ಯಕ್ರಮವನ್ನು ಏರ್ಪಿಡಿಸಿದ್ದು, ಎಲೆಯ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಹೊರತರಲು ಇದು ಸೂಕ್ತ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು,
ಮುಖ್ಯ ಅತಿಥಿಯಾಗಿದ್ದ, ಧಾರವಾಡದ ಡಯಟ್ ನ ಉಪನ್ಯಾಸಕಿ ಡಾ, ರೇಣುಕಾ ಅಮಲಝರಿ, ಪಬ್ಲಿಕ್ ಟಿವಿಯ ವರದಿಗಾರ್ತಿ ಅರುಣಾ ಸಿರಗುಪ್ಪಿ, ನವರಸ ಸ್ನೇಹಿತರ ವೇದಿಕೆಯ ರಾಜ್ಯಾದ್ಯಕ್ಷರಾದ ಬಾಬಾಜಾನ ಮುಲ್ಲಾ ಮಾತನಾಡಿದರು. ಎಲ್ ಐ ಲಕ್ಕಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸವದತ್ತಿಯ ಶಿಕ್ಷಕ ಪ್ರಶಾಂತ ಹಂಪಣ್ಣವರ, ಕೆಸಿಡಿ ಉಪನ್ಯಾಸಕರಾದ ರಾಜೇಂದ್ರಕುಮಾರ ಮಠ ಖ್ಯಾತ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ, ಹಾಜರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಣಿತಾ ಪ್ರಶಸ್ತಿಯನ್ನು ಅರುಣಾ ಸಿರಗುಪ್ಪಿ, ಶ್ರೀದೇವಿ ವಾಯ್ ಮರಕುಂಬಿ, ಅಮಜವ್ವ ಭೋವಿ ಕರ್ನಾಟಕ ಸೇವಾರತ್ನ ಪ್ರಶಸ್ತಿಯನ್ನು ಮಾರುತಿ ಗಂಗಪ್ಪ ಭಜಂತ್ರಿ ಅವರಿಗೆ ಪ್ರಧಾನ ಮಾಡಲಾಯಿತು, ವಿದ್ಯಾ ರವಿಕುಮಾರ್ ದೇವಗಿರಿ ಪ್ರಾರ್ಥಿಸಿದರು, ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕ ಮಾತನಾಡಿದರು, ಸಂತೋಷ ಭದ್ರಾಪೂರ ನಿರೂಪಿಸಿ ವಂದಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

