ಹುಬ್ಬಳ್ಳಿ : ಮಹಾಮಾರಿ ಕೋವಿಡ್ ಬಿಎಫ್ 7 ಉಪತಳಿಯ ಮುಂಜಾಗ್ರತಾ ಕ್ರಮಕ್ಕಾಗಿ ಏನೇನು ತೆಗೆದುಕೊಳ್ಳಬೇಕು ತೆಗೆದುಕೊಳ್ಳಲಾಗಿದ್ದು ಬೇರೆ ಬೇರೆ ದೇಶಳಿಂದ ಬರುವ ಪ್ರಯಾಣಿಕರಲ್ಲಿ ಶೇಕಡಾ ಎರಡಕ್ಕಿಂತ ಹೆಚ್ಚು ಪ್ರಮಾಣದ ಸೋಂಕು ಕಂಡು ಬಂದರೆ ಖಂಡಿತವಾಗಿಯೂ ಕಡ್ಡಾಯ ಟೆಸ್ಟ್ ಜೊತೆಗೆ ಅಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವೈದ್ಯಕೀಯ ಖಾತೆ ಸಚಿವ ಸುಧಾಕರ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕೋವೀಡ್ ಉಪತಳಿ ಬಿಎಫ್ 7 ಸಂಭವ ಹಿನ್ನೆಲೆಯಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಕುರಿತು ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಕೋವಿಡ್ ಗಾಗಿ ಪ್ರತ್ಯೇಕ ಹಾಸಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ, ಔಷಧಿ ದಾಸ್ತಾನು, ಆಕ್ಸೀಜನ್ ವ್ಯವಸ್ಥೆ ಎಲ್ಲದರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಿಮ್ಸ್ ನಲ್ಲಿಯೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ಕಿಮ್ಸ್ ವೀಕ್ಷಣೆ ನಂತರ ನನಗೆ ಸಮಾಧಾನ ತಂದಿದೆ, ಜನ ಯಾವುದೇ ಕಾರಣಕ್ಕೂ ಆತಂಕ ಪಟ್ಟುಕೊಳ್ಳೋ ಅಗತ್ಯವಿಲ್ಲ, ಇದರ ಹೊರತಾಗಿಯೂ ಕೋವಿಡ್ ಹೊಸ ತಳಿ ತೊಂದರೆ ಕೊಟ್ಟಲ್ಲಿ ನಿಮ್ಮ ರಕ್ಷಣೆ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.
ಇನ್ನೂ ಕಿಮ್ಸ್ ನಲ್ಲಿ ಎರಡು ಆಕ್ಸೀಜನ್ ಪ್ಲಾಂಟ್ ಇದೆ. ಹೊಸ ವರ್ಷಕ್ಕೆ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಟಫ್ ರೂಲ್ಸ್ ಅನ್ನೋದಕ್ಕಿಂತ ಜನ ಟಫ್ ಮೈಂಡ್ ಆಗಬೇಕು. ಕೋವಿಡ್ ಎದುರಿಸ್ತೇವೆ ಅಂತ ದೃಢ ಸಂಕಲ್ಪ ಮಾಡಬೇಕು, ಸರ್ಕಾರ ಮತ್ತು ನಮ್ಮ ಇಲಾಖೆ ದೃಢ ಸಂಕಲ್ಪ ಮಾಡಿದೆ. ಕೋವಿಡ್ ಹೊಸ ಅಲೆಯನ್ನು ಮಣಿಸ್ತೇವೆ. ಮೊದಲ ಮೂರು ಅಲೆಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ ಹಾಗೆಯೇ ಈಗಲೂ ಮಾಡ್ತೇವೆ.
ಕೊರೊನಾ ವೈರಸ್ನ ಹೊಸ ತಳಿ ಒಮಿಕ್ರಾನ್ (ಸಬ್‌ವೇರಿಯಂಟ್) ಬಿಎಫ್ 7 ಕುರಿತು ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈಗಿನಿಂದಲೇ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ. ಚೀನಾ, ಅಮೆರಿಕ, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ, ಅಮೆರಿಕ ಮತ್ತು ಚೀನಾ ದೇಶಗಳಲ್ಲಿ ಬಿಎಫ್ 7 ಕಂಡುಬಂದಿದೆ. ಇದು ನಮ್ಮ ದೇಶವನ್ನು ಕೂಡ ಪ್ರವೇಶಿಸುವ ಸಾಧ್ಯತೆಗಳಿದೆ. ಹೀಗಾಗಿ, ಜಾಗೃತೆ ವಹಿಸಬೇಕು. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಬಳಕೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಶೇ.2 ಪರ್ಸೆಂಟೇಜ್ ಟೆಸ್ಟ್ ಮುಂದುವರಿಯುತ್ತೆ, ಏನಾದ್ರೂ ಕೇಸ್ ಗಳು ಪತ್ತೆಯಾದಲ್ಲಿ ಸ್ಕ್ರೀನಿಂಗ್, ಟೆಸ್ಟಿಂಗ್ ಮಾಡ್ತೇವೆ.
ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ನಮ್ಮ ಬಳಿ ಇನ್ನೂ 8.50 ಲಕ್ಷ ಡೋಸ್ ವ್ಯಾಕ್ಸಿನ್ ಇದೆ. ಇದರೊಂದಿಗೆ ಇನ್ನೂ 20 ರಿಂದ 25 ಲಕ್ಷ ವ್ಯಾಕ್ಸಿನ್ ತರಿಸೋಕೆ ತಯಾರಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

