ಧಾರವಾಡ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಇಂದು ಧಾರವಾಡ ಗ್ರಾಮೀಣ ಕ್ಷೇತ್ರ 71, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕರೆಯ ಮೇರೆಗೆ ಪಾದಯಾತ್ರೆ ನಡೆಸಿದರು.
ಶಿವಲೀಲಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆ ಉಪ್ಪಿನಬೆಟಗೇರಿ ಗ್ರಾಮದಿಂದ ಆರಂಭವಾಗಿ, ಅಮ್ಮಿನಭಾವಿ ಮೂಲಕ, ಮುರಘಾಮಠದ ಮುಂದೆ ಸಾಗಿ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ತಲುಪಿ ಅಂತ್ಯ ಗೊಂಡಿತು. ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ ಮಾತನಾಡಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನ್ಯಾಯ ಕೇಳುವ ಹಾಗೆ ವಾತಾವರಣ ಇಲ್ಲಾ. ವಿನಾಕಾರಣ ಬಿಜೆಪಿ ಅವರು ಶಾಸಕರ ಸಹಿತ ವಿನಾಕಾರಣ ತೊಂದ್ರೆ ಕೊಡುತ್ತಿದ್ದಾರೆ. ಏನೆ ತೊಂದ್ರೆ ಕೊಟ್ಟರೂ ಸಹಿತ ನಾವೆಲ್ಲಾ ಜನರ ಮುಂದೆ ಹೋಗಿ ಚುನಾವಣೆ ಎದುರಿಸುತ್ತೇವೆ. ಪಾದಯಾತ್ರೆ ಮುಂದಿನ ದಿನಗಳಲ್ಲಿ ಮತ್ತೆ ಮುಂದುವರೆಸುತ್ತೇವೆ ಎಂದು
ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

