Breaking News


ವಾಸುದೇವ ಸೂರಕೋಡ   ಎಲ್ಲಾ ಸರ್ಕಾರಿ ಶಾಲೆಗಳಿಗೆ  ಕಲಿಕಾ ಸಾಮಗ್ರಿ ವಿತರಣೆ

ಧಾರವಾಡ  : ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸಮಾಜಸೇವಕ ವಾಸುದೇವ ಸೂರಕೋಡ ಅವರು, ಲೂಸಿ ಸಾಲ್ಡಾನರವರ, ಶಾಲೆಗಳಿಗೆ ನೀಡುತ್ತಿರುವ ನಿರಂತರ ದತ್ತಿ ಕಾರ್ಯಕ್ರಮದಿಂದ  ವಾಸುದೇವ ಸೂರಕೋಡ ಅವರು, ಎಲ್ಲಾ ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆಭಾ ಕಾರ್ಡ ಮಾಡಿಕೊಡುವುದಲ್ಲದೇ, ಎಲ್ಲಾ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಕಲಿಕಾ ಸಾಮಗ್ರಿಗಳನ್ನು ವಿವರಿಸಿದರು.

ಇಂದು ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಅವರು ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಬಡ ಮಕ್ಕಳಿಗೆ ಏನಾದರೂ ಸಹಾಯ ಬೇಕಿದ್ದರೆ ನಾನು ಸೇವೆ ಮಾಡಲು‌ ಸಿದ್ದನಿರುವೆ ಎಂದು ತಿಳಿಸಿ, ಧಾರವಾಡದ ಅಕ್ಷರತಾಯಿ ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ಶಾಲೆಗಳಿಗೆ ದತ್ತಿ ನೀಡಿದ್ದಾರೆ. ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು,ತಮ್ಮ ಸಂಸಾರವಾಯಿತು,ಎನ್ನುವವರ ಮದ್ಯೆ ಧಾರವಾಡದ ಅಕ್ಷರತಾಯಿ ಆದರ್ಶವಾಗಿ ನಿಲ್ಲುತ್ತಾರೆ. ತಮಗೆ ಬರುವ ಪಿಂಚಣಿ ಹಣದಲ್ಲಿ ಅರ್ಧದಷ್ಟು ಕೂಡಿಟ್ಟು, ನಿವೃತ್ತಿಯಾಗಿ ಹದಿನೈದು ವರ್ಷ ಕಳೆದರು ತಮ್ಮ ದತ್ತಿಯನ್ನು ಮುಂದುವರೆಸಿದ್ದು ನಮಗೆಲ್ಲ ಹೆಮ್ಮೆ ಅನಿಸುತ್ತದೆ ಅಲ್ಲದೇ ಅವರಿಂದ ಅಕ್ಷರದ ಬೆಳಕು ಕಂಡ ನಾವು ಧನ್ಯರು ಎಂದು ತಿಳಿಸಿದರು ಮುಖ್ಯ ಶಿಕ್ಷಕಿ ಬಿ ಎಂ ಸುತಾರ, ಶಿಕ್ಷಕ ಎಲ್ ಐ ಲಕ್ಕಮ್ಮನವರ ಕೆ ಎಂ ಶಿವಳ್ಳಿ ಹಾಗೂ ಅಡುಗೆ ಸಹಾಯಕಿ ಆಯೇಶಾ ಎಲಿಗಾರ ಹಾಗೂ ಎಲ್ಲಾ ಮಕ್ಕಳು ಹಾಜರಿದ್ದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *