Breaking News

ಜೈನ ಮುನಿಗಳ ಹತ್ಯೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಜೈನ ಮುನಿಗಳ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಬಿಗ್ರೇಡ್ ಹಾಗೂ ಹಿಂದೂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜೈನಮುನಿಗಳಾದ ಕಾಮಕುಮಾರ ನಂದಿಮಹಾರಾಜರ ಹತ್ಯೆ ಹಾಗೂ ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಬರ್ಬರವಾಗಿ ಹತ್ಯೆಗೈದ ಪ್ರಕರಣ ಖಂಡನೀಯ ಎಂದು ಮೌನ ಪ್ರತಿಭಟನೆ ನಡೆಸಿದರು.

ಸರ್ಕಾರ ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿಯನ್ನು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲರಿಗೆ ಸಲ್ಲಿಸಿದರು.

Share News

About bigtvnews22

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *