ಐರ್ಲೆಂಡ್‌ನಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ ವತಿಯಿಂದ ನಡೆಸಲಾಗುತ್ತಿದ್ದ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಆಶ್ರಮದ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ 2014ರಲ್ಲಿ 796 ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈಗ 11 ವರ್ಷಗಳ ನಂತರ ಈ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಆಶ್ರಮದಲ್ಲಿ ಮಕ್ಕಳನ್ನು ಕೊಂದು ಹೂಳಲಾಗಿತ್ತು. ಈಗ ನಡೆಯುತ್ತಿರುವ ಉತ್ಖನನದಿಂದ ಅಲ್ಲಿನ ಅತ್ಯಂತ ಪ್ರಭಾವಶಾಲಿ ಚರ್ಚ್ ಎಂದು ಪರಿಗಣಿಸಲಾಗುವ ‘ಚರ್ಚ್ ಆಫ್ ಐರ್ಲೆಂಡ್’ನ ಇನ್ನಷ್ಟು ಕರಾಳ ಕೃತ್ಯಗಳು ಬಯಲಾಗಲಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

