Breaking News

ಮಳೆರಾಯನಿಂದ ಹಾನಿಯಾಗದ ತಾಜ್‌ ಮಹಲ್…

ಆಗ್ರಾ (ಉತ್ತರಪ್ರದೇಶ):ವ್ಯಾಪಕ ಮಳೆಯಿಂದಾಗಿ ಯಮುನಾ ನದಿ ಉಕ್ಕೇರಿದ್ದು, ದೆಹಲಿಯನ್ನು ಮುಳುಗಿಸಿದೆ. ಇತ್ತ ಅದೇ ನದಿ ದಡದ ಮೇಲಿರುವ ತಾಜ್​ಮಹಲ್​ವರೆಗೂ ನೀರು ನುಗ್ಗಿದೆ. ಐತಿಹಾಸಿಕ ಮಹಲ್​ನ ಗೋಡೆಗಳವರೆಗೆ ನೀರು ಬಂದು ನಿಂತಿದೆ. ಇಷ್ಟಾದರೂ ಇದರಿಂದ ಸ್ಮಾರಕಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ನದಿನೀರಿನ ಮಟ್ಟವು 499 ಅಡಿಗಳಷ್ಟು ಮೇಲೆ ಬಂದಿದೆ. ಇದು ಮಧ್ಯಮ ಪ್ರವಾಹದ ಮಟ್ಟವಾಗಿದೆ. ಮಂಗಳವಾರ ಈ ಭಾಗದಲ್ಲಿ 499.97 ಅಡಿಯಷ್ಟು ನೀರು ಬಂದ ಕಾರಣ ತಾಜ್​ಮಹಲ್‌ನ ಗೋಡೆಗಳವರೆಗೆ ನೀರು ಬಂದಿದೆ. ಹಿಂದಿನ ಭಾಗದ ಉದ್ಯಾನವನ್ನು ಸಂಪೂರ್ಣವಾಗಿ ಮುಳುಗಿಸಿದೆ. 1978 ಮತ್ತು 2010 ರಲ್ಲಿ ಪ್ರವಾಹ ಬಂದು ಇದೇ ರೀತಿ ಆಗಿತ್ತು. ಆದರೆ, ಏನೂ ಆಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಸ್ಮಾರಕದಲ್ಲಿನ ಮುಖ್ಯ ಸಮಾಧಿಯನ್ನು 42 ಬಾವಿಗಳ ಅಡಿಪಾಯದ ಮೇಲೆ ಎತ್ತರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಎಷ್ಟೇ ನೀರು ಬಂದರೂ ತಾಜ್​ಮಹಲ್​ ಮುಳುಗಲ್ಲ. ಯಾವುದೇ ಹಾನಿ ಕೂಡ ಉಂಟಾಗುವುದಿಲ್ಲ. ಉದ್ಯಾನವನಗಳು ನೀರು ತುಂಬಿಕೊಂಡಿವೆ. ಪ್ರವಾಹ ಇಳಿದ ಬಳಿಕ ಸ್ವಚ್ಛ ಮಾಡಲಾಗುವುದು ಎಂದು ಅಧಿಕಾರಿಗಳ ಸ್ಪಷ್ಟನೆ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *