ಹುಬ್ಬಳ್ಳಿ ನೇಕಾರನಗರದಲ್ಲಿ ಭಾನುವಾರ ನಡೆದ ಹಾಡುಹಗಲೇ ನಾಗರಾಜ ಚಲವಾದಿ ಎಂಬ ಯುವಕನ ಕೊಲೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ
ಕಮಿಷನರ್ ರಮನ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಆತಂಕ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.ಹುಬ್ಬಳ್ಳಿಯಂತ ದೊಡ್ಡ ನಗರದಲ್ಲಿ ಎರಡು ತಿಂಗಳಿಗೊಮ್ಮೆ ಕೊಲೆಗಳು ಆಗುವುದು ಸಹಜ. ಇದರಿಂದ ಯಾವುದೇ ರೀತಿಯಾದ ಕಾನೂನು ಸುವ್ಯಸ್ಥೆಗೆ ದಕ್ಕೆ

ಬರುವುದಿಲ್ಲ. ಈಗಾಗಲೇ ಈ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಏನೂ ಹೇಳಲು ಬರೋದಿಲ್ಲ . ಕೊಲೆಗೆ ಏನು ಕಾರಣ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು ಸಮಗ್ರವಾಗಿ ತನಿಖೆಯನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಕಮೀಷನರ್ ಹೇಳಿಕೆ ಈಗ ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಹುಟ್ಟು ಮಾಡಿದೆ.- ರಮಣ ಗುಪ್ತಾ, ಹು-ಧಾ ಪೊಲೀಸ್ ಆಯುಕ್ತ
bigtvnews | Hubli Dharwad News | Kannada News | Karnataka News Hubli News | News In Hubli | Local news

