Breaking News

ನವಲಗುಂದ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ; ನವಲಗುಂದ ತಾಲೂಕಿನ ನೂತನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುಂಡಲೀಕ ಹನಮಂತಪ್ಪ ಮುಧೋಳೆ, ಉಪಾಧ್ಯಕ್ಷರಾಗಿ ನೀಲಪ್ಪ ಹೆಗ್ಗಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎನ್.ಹಕ್ಕರಕಿ, ಖಚಾಂಚಿಯಾಗಿ ಹುಚ್ಚಪ್ಪ ಭೋವಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಲೋಚನೇಶ ಹೂಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗಣಪತಿ
ಗಂಗೋಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸುಶೀಲೆಂದ್ರ ಕುಂದರಗಿ ಅವರ ಉಪಸ್ಥಿತಿಯಲ್ಲಿ ಪಟ್ಟಣದ ಲೋಕೋಪಯೋಗಿ ಪ್ರವಾಸಿ
ಮಂದಿರದಲ್ಲಿ ನಡೆದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ತಾಲೂಕ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ
ಆಯ್ಕೆ ಮಾಡಲಾಯಿತು. ಪತ್ರಕರ್ತರಾದ ಶ್ರೀಕಾಂತ ಮನುವಾಚಾರ್ಯ,ಈಶ್ವರ ಲಕ್ಕುಂಡಿ, ಅಂದಾನಿ ಕಾತ್ರಾಳ, ಉಮೇಶ ಹಕ್ಕರಕಿ ಉಪಸ್ಥಿತರಿದ್ದರು.

Share News

About admin

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *