ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ
ಮಹಾಜನ್ ವರದಿ 1956 ರಲ್ಲಿ ಅರ್ಜಿ ಸಲ್ಲಿಕೆಯಾಗಿದೆ
ನಾವು ಅದನ್ನ ಒಪ್ಪಿಕೊಂಡಿದ್ದೇವೆ
ಈಗ ಮಹಾರಾಷ್ಟ್ರ 865 ಹಳ್ಳಿಗಳನ್ನು ಕ್ಲೈಮ್ ಮಾಡುತ್ತಿದ್ದಾರೆ
ಮಹಾರಾಷ್ಟ್ರ ಸರ್ಕಾರ ಆರೋಗ್ಯ ಇಲಾಖೆಯ ಸ್ಕೀಮ್‌ಗಳನ್ನ ಈ ಹಳ್ಳಿಗಳಲ್ಲಿ ಇಂಪ್ಲಿಮೇಂಟ್ ಮಾಡುತ್ತಿದೆ
ಇಷ್ಟೇಲ್ಲಾ ಬೆಳವಣಿಗೆ ಆದ್ರೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸುಮ್ಮನೆ ಇದೆ

ಮುಖ್ಯಮಂತ್ರಿಗಳು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ
ಈ ಸರ್ಕಾರ ಸತ್ತು ಹೋಗಿದೇಯಾ
ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಆಗುತ್ತದೆ
ಮಹಾರಾಷ್ಟ್ರದಲ್ಲಿಯೂ ಕನ್ನಡಿಗರು ಇದ್ದಾರೆ
ಅವರೆಲ್ಲರೂ ಕರ್ನಾಟಕಕ್ಕೆ ಬರುತ್ತೆವೆಂದು ಹೇಳಿಕೆ ನೀಡಿದ್ದಾರೆ
ಅವರಿಗೆ ಕರ್ನಾಟಕದ ಸವಲತ್ತುಗಳನ್ನು ನೀಡುವುದು ಒಕ್ಕೂಟದ ವ್ಯವಸ್ಥೆಯ ಲಕ್ಷಣ ಅಲ್ಲ
ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು
ಪದೇ ಪದೇ ಶಾಂತವಾದ್ರೆ, ನೆಲಜಲ ಬಗ್ಗೆ
ಅವರು ಪದೇ ಪದೇ ಕೆಣಕಲಿಕ್ಕೆ ಪ್ರಾರಂಭ ಮಾಡುತ್ತಾರೆ

ಏಕನಾಥ ಶಿಂಧೆಯ ಮಹಾರಾಷ್ಟ್ರದ ಸರ್ಕಾರವನ್ನ ಕೇಂದ್ರ ಸರ್ಕಾರ ಡಿಸ್ಮಿಸ್ ಮಾಡಬೇಕು
ತಕ್ಷಣ ನಮ್ಮ ಮುಖ್ಯಮಂತ್ರಿಗಳನ್ನ ಕೇಂದ್ರ ಸರ್ಕಾರ ರಾಜೀನಾಮೆ ಪಡೆಯಬೇಕು